alex Certify ವಿಶೇಷಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : 2024-25 ನೇ ಸಾಲಿಗೆ ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಟರ್ ಅಸಿಸ್ಟೆಂಟ್ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಅನುದಾನ ರಹಿತ ಕೋರ್ಸುಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ (ಫಾರ್ ವಿಜ್ಯುವಲಿ ಇಂಪೇರ್ಡ್) ಹಾಗೂ ಅಪಾರೇಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಮೂರು ವರ್ಷಗಳ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ (ಅಖಿಲ ಭಾರತ ಮಟ್ಟದಲ್ಲಿ) ವಿಶೇಷ ಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕಗಳೊಂದಿಗೆ ತೇರ್ಗಡೆ ಹಾಗೂ ಮೂಳೆ ಮತ್ತು ಕೀಲು ಅಂಗವಿಕಲತೆ ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ ಶೇ.60 ಡಿಬಿ ಮತ್ತು ಮೇಲ್ಪಟ್ಟು, ಭಾಗಶಃ ಮತ್ತು ಪೂರ್ಣ ಅಂಧತ್ವ 6/60 ಅಥವಾ 20/200 ಸ್ನೆಲೆನ್(ಕಂಪ್ಯೂಟರ್ ಅಪ್ಲಿಕೇಷನ್ಸ್ (ಫಾರ್ ವಿಜ್ಯುವಲಿ ಇಂಪೇರ್ಡ್) ಕೋರ್ಸಿಗೆ) ಅಂಗವೈಕಲ್ಯತೆಯ ಲಕ್ಷಣಗಳು ಹೊಂದಿರಬೇಕು.
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಲಾಗಿದೆ. ಪ್ರವೇಶಕ್ಕೆ ಅರ್ಜಿಗಳನ್ನು ಜೆಎಸ್ಎಸ್ ಮಹಾವಿದ್ಯಾಪೀಠ, ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್, ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯ, ಮೈಸೂರು-570005 ವಿಳಾಸದಿಂದ (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಹಾಗೂ ಎಸ್ಸಿ/ಎಸ್ಟಿ/ಸಿ-1 ವರ್ಗದವರಿಗೆ ರೂ.50) ನಗದು ಅಥವಾ ಡಿಡಿ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಪಡೆಯಬಹುದು ಅಥವಾ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ವೆಬ್ಸೈಟ್ www.jsspda.org ಇ-ಮೇಲ್/ ಮೊಬೈಲ್ 9844644937 ನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜೂನ್, 15 ರೊಳಗೆ ಸಲ್ಲಿಸಬೇಕು ಎಂದು ಮೈಸೂರು ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಪ್ರಾಂಶುಪಾಲರು ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...