ಶಿವಮೊಗ್ಗ : 2024-25 ನೇ ಸಾಲಿನ ರಾಜ್ಯ ಅನುದಾನ ಸಂಹಿತೆ ಮತ್ತು ಶಿಶು ಕೇಂದ್ರೀಕೃತ ವಿಶೇಷ ಶಾಲೆಗಳಲ್ಲಿ ವಿಶೇಷ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯ ಅನುದಾನ ಸಂಹಿತೆಯಡಿಯಲ್ಲಿ ನಡೆಸುತ್ತಿರುವ ಶಾಲೆಗಳಾದ ಶಿವಭದ್ರ ಟ್ರಸ್ಟ್(ರಿ), ತರಂಗ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ವಸತಿಶಾಲೆ -ಬಸವೇಶ್ವರ ನಗರ ಶಿವಮೊಗ್ಗ, ಕೃಷ್ಣ-9664909661, ಜಯರಾಮ-9742883607, ಶಿವಭದ್ರ ಟ್ರಸ್ಟ್(ರಿ), ತರಂಗ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ವಸತಿಶಾಲೆ -ನ್ಯೂಟೌನ್, ಭದ್ರಾವತಿ, – ತಾರಮಣಿ-9972058025, ಬಸವರಾಜ-7019291649, ರೋಟರಿ 75ನೇ ವಾರ್ಷಿಕ ದತ್ತಿನಿಧಿ, ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ- ವಿದ್ಯಾನಗರ, ಶಿವಮೊಗ್ಗ, – ಚಂದ್ರಯ್ಯ-9945797120, ಗಿರೀಶ್-9972170727, ಶ್ರೀ ಶಾರದದೇವಿ ಅಂಧ ಮಕ್ಕಳ ವಸತಿಶಾಲೆ- ಅನುಪಿನಕಟ್ಟೆ ರಸ್ತೆ, ಗೋಪಾಳ, ಶಿವಮೊಗ್ಗ, – ಈಶ್ವರ ಭಟ್-9972719596, ಸುರೇಶ್-9449401899.
ಶಿಶು ಕೇಂದ್ರೀಕೃತ ವಿಶೇಷ ಶೈಷಣಿಕ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳಾದ ನವಚೇತನ ಬುದ್ದಿಮಾಂದ್ಯ ಕ್ಷೇಮಾಭಿವೃದ್ದಿ ಸಂಸ್ಥೆ ರಿ, ನವಚೇತನ ಬುದ್ದಿಮಾಂದ್ಯ ಮಕ್ಕಳ ವಸತಿಶಾಲೆ, -ಸೊರಬ, ಶಿವಮೊಗ್ಗ ಜಿಲ್ಲೆ, – ರಾಮಪ್ಪ.ಜಿ-9449159963, ರವೀಂದ್ರ-9480466447 ಹಾಗೂ ಶಾಂತಿನಿಕೇತನ ಚಾರಿಟೇಬಲ್ ಸೊಸೈಟಿ ರಿ, ಮದರ್ ತೆರೆಸಾ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ವಸತಿಶಾಲೆ- ಹಳೇಜೇಡಿಕಟ್ಟೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ, – ರಾಬಿನ್.ಎಂ-8971604493, ರಾಜೇಶ್-9148562414.
ಈ ಶಾಲೆಗಳಲ್ಲಿ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತರು ಸಂಪರ್ಕ ಸಂಖ್ಯೆಯೊಂದಿಗೆ ಮಾಹಿತಿ ಪಡೆಯಬೇಕೆಂದು, ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.