alex Certify ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ 270 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆಗಸ್ಟ್ -2024 ರ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲಾಗಿದೆ.

ಬೆಂಗಳೂರು ವಿಭಾಗೀಯ ವ್ಯಾಪ್ತಿಗೆ ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಜಿಲ್ಲೆಗಳನ್ನು ಒಳಗೊಂಡಿದ್ದು ಈ ವಿಭಾಗೀಯ ವ್ಯಾಪ್ತಿಯಲ್ಲಿ 69 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು ಇದರಲ್ಲಿ 07 ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಶೇ.100% ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಉಳಿದ 62 ತರಬೇತಿ ಸಂಸ್ಥೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಅನ್ವಯ ಪ್ರವೇಶಾವಕಾಶವಿರುತ್ತದೆ.

ಐಟಿಐಗಳಲ್ಲಿ 2024ನೇ ಶೈಕ್ಷಣಿಕ ಸಾಲಿನ ಆನ್‍ಲೈನ್ ಪ್ರವೇಶದ ಮೂಲಕ ಸರ್ಕಾರದ ನಿಯಮಾನುಸಾರ ಮೇರಿಟ್ ಮತ್ತು ಮೀಸಲಾತಿಯನ್ವಯ ಪಾರದರ್ಶಕವಾಗಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಡಿಜಿಟಿ ನವ ದೆಹಲಿ ನಿಯಮಾನುಸಾರ ಈ ಸಂಸ್ಥೆಗಳಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಹೊಂದಿರುವ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ 1-2 ವರ್ಷದ ವೃತ್ತಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.

ಸರ್ಕಾರಿ ಸಂಸ್ಥೆಗಳಲ್ಲಿ ವಾರ್ಷಿಕ ರೂ.1200/- ಗಳು ಮಾತ್ರ ಬೋಧನ ಶುಲ್ಕವಿರುತ್ತದೆ. ಸರ್ಕಾರದ ನಿಯಾಮಾನುಸಾರ ಈ ಸಂಸ್ಥೆಗಳಲ್ಲಿ ಪ್ರವೇಶ ಹೊಂದುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತರಬೇತಿ ಅನುಕೂಲವಾಘುವ ಉಚಿತ ಪರಿಕರಗಳನ್ನು ವಿತರಿಸಲಾಗುವುದು.
ವೆಲ್ಡರ್, ಕಾರ್ಪೇಂಟರ್, ಸೀಟ್ ಮೆಟಲ್ ವರ್ಕ್‍ರ್, ಸರ್ಫಸ್ ಒರನಾಮೆಷನ್ ಟೆಕ್ನಿಕ್, ವೈರ್ ಮ್ಯಾನ್, ಡ್ರೇಸ್ ಮೇಕಿಂಗ್, ಸ್ವೀಂಗ್ ಟೆಕ್ನಲಾಜಿ, ಮಾಸನ್, ಪ್ಲಂಬರ್ ಇತ್ಯಾದಿ ವೃತ್ತಿಗಳಿಗೆ 8 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ 10 ನೇ ತರಗತಿ ಅನುತ್ತೀರ್ಣ ಅಂಕಪಟ್ಟಿಯನ್ನು ಹೊಂದಿರವ ವಿದ್ಯಾರ್ಥಿಗಳಿಗೂ ಸಹ ಐಟಿಐ ಗಳಲ್ಲಿ ತರಬೇತಿ ಹೊಂದಲು ಅವಕಾಶವಿರುತ್ತದೆ. ಉಳಿದಂತಹ ಇತರೆ ವಿವಿಧ ವೃತ್ತಿಗಳಿಗೆ 10 ನೇ ತರಗತಿ ಉತ್ತೀರ್ಣರಾಗಿರಬೇಕು.

ಬೆಂಗಳೂರು ವಿಭಾಗೀಯ ವ್ಯಾಪ್ತಿಯಲ್ಲಿ ಹಲವಾರು ಸರ್ಕಾರಿ ಐಟಿಐ ಗಳು ಕೈಗಾರಿಕೆ 4.0ಗೆ ತಕ್ಕಂತೆ ಅಧುನಿಕ ಸೌಲಭ್ಯಗಳನ್ನು ಒಳಗೊಂಡ ವಿವಿಧ ವೃತ್ತಿಗಳನು ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಪ್ರಾರಂಭಿಸಿದ್ದು ಆಯಾ ಜಿಲ್ಲೆ ತಾಲೂಕುಗಳಲ್ಲಿರುವ ವಿವಿಧ ಉದ್ದಿಮೆ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೊಂದಲು ಸಹಕಾರಿಯಾಗಲಿದೆ.

ಬೆಂಗಳೂರು ವಿಭಾಗೀಯ ವ್ಯಾಪ್ತಿಯ ಹಲವಾರು ಐಟಿಐಗಳಲ್ಲಿ ಉಭಯ ತರಬೇತಿ ವ್ಯವಸ್ಥೆ (ಡಿಎಸ್‍ಟಿ) ಅಡಿಯಲ್ಲಿ ವಿವಿಧ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ವೃತ್ತಿ ತರಬೇತಿಗಳನ್ನು ಪ್ರಾರಂಭಿಸಿದ್ದು ಅಪ್ರೆಂಟಿಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಹೊಂದುವಲ್ಲಿ ನೆರವಾಗಲಿದೆ. ರಾಜ್ಯದ ಯುವ ಜನತೆಯೂ ಐಟಿಐ ಗಳಲ್ಲಿ ಪ್ರವೇಶ ಹೊಂದವ ಮೂಲಕ ಉದ್ಯೋಗಸ್ಥರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಇಲಾಖೆಯೂ ಸಹಕಾರಿಯಾಗಲಿದೆ.

ಐಟಿಯ ಪ್ರವೇಶ ಬಯಸುವ ಅಭ್ಯರ್ಥಿಗಳು ಹತ್ತಿರದ ಸರ್ಕಾರಿ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಜಿಂಟಿ ನಿರ್ದೇಶಕರು (ತರಬೇತಿ) ಮತ್ತು ಪದನಿಮಿತ ಜಂಟಿ ಶಿಶಿಕ್ಷು ಸಲಹಗಾರರು ವಿಭಾಗೀಯ ಕಛೇರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕೌಶಲ್ಯ ಭವನ ಬೆಂಗಳೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...