ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಆಹಾರ ಇಲಾಖೆಯು ಮತ್ತೊಮ್ಮೆ ಅವಕಾಶ ನೀಡಲಿದೆ., ಸೆಪ್ಟೆಂಬರ್ 15 ರಿಂದ 30 ರೊಳಗೆ ಯಾವುದಾದರೂ ಒಂದು ಅಥವಾ ಎರಡು ದಿನ ಅವಕಾಶ ನೀಡುವ ಸಾಧ್ಯತೆಯಿದೆ.
ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಲು ಆಹಾರ ಇಲಾಖೆ ಅವಕಾಶ ನೀಡಲಿದ್ದು, ಪಡಿತರ ಚೀಟಿದಾರರು ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಹೊಸದಾಗಿ ಮದುವೆಯಾದ ದಂಪತಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಯಾವುವು?
1. ಎಲ್ಲಾ ಸದಸ್ಯರ ಆಧಾರ್ ಕಾರ್ಡ್
2. ಆದಾಯ ಪ್ರಮಾಣ ಪತ್ರ
3. ಜಾತಿ ಪ್ರಮಾಣ ಪತ್ರ
4. ವಿಳಾಸದ ಪುರಾವೆ
5. ಜನ್ಮ ದಿನಾಂಕ ( ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ)
6. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಕುಟುಂಬದ ಆದಾಯವನ್ನು ಪರಿಗಣಿಸಿ ಎಪಿಎಲ್ ನೀಡಬೇಕೋ ಅಥವಾ ಬಿಪಿಎಲ್ ನೀಡಬೇಕೋ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವವರು ಅಂತವರು ತಮ್ಮ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಅಥವಾ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.