ಧಾರವಾಡ: ಹುಬ್ಬಳ್ಳಿ -ಧಾರವಾಢ ನಗರಾಭಿವೃದ್ಧಿ ಪ್ರಾಧಿಕಾರವು ಹುಬಳ್ಳಿ ತಾಲ್ಲೂಕ ಉಣಕಲ್ ಗ್ರಾಮದ ಸರ್ವೇ ನಂ.177 ಹಾಗು 178 ರ ಒಟ್ಟು 20 ಎಕರೆ 17 ಗುಂಟೆ ಜಮೀನಿನಲ್ಲಿ ರೈತರ ಸಹಭಾಗಿತ್ವದಲ್ಲಿ ವಸತಿ ವಿನ್ಯಾಸ ರಚಿಸಲಾಗಿದ್ದು. ಈ ಕೆಳಗಿನ ಅಳತೆಯ ವಿನ್ಯಾಸಗಳು ಇರುತ್ತವೆ.
6.0ಮೀ x 9.0ಮೀ ಅಳತೆಯ 30, 9.0ಮೀ x 12.0ಮೀ ಅಳತೆಯ 21, 9.0ಮೀ x 15.0ಮೀ ಅಳತೆಯ 22, 12.0ಮೀ x 18.0ಮೀ ಅಳತೆಯ 20, 15.0ಮೀ x 24.0 ಮೀ ಅಳತೆಯ 6, 6.0ಮೀ ಅಗಲದ ನಿವೇಶನಗಳು 7, 9.0ಮೀ ಅಗಲದ ನಿವೇಶನಗಳು 9, ಅನಿಯಮಿತ ವಸತಿ ನಿವೇಶನಗಳು 20 ಈ ಯೋಜನೆಯಲ್ಲಿ ಮುಂದೆ ಪ್ರಾಧಿಕಾರವು ನಿಗಧಿಪಡಿಸುವ ಬೆಲೆಗೆ ನಿವೇಶನಗಳನ್ನು ಪಡೆಯಲು ಇಚ್ಛೆಯುಳ್ಳವರು ಪ್ರಾಧಿಕಾರದ ವೆಬ್‍ಸೈಟ್ www.hududa.org.com ರಲ್ಲಿ ಫಾರಂನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಮೇ.5 ರ ಸಂಜೆ 4 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು.
ಪ್ರಾಧಿಕಾರದಲ್ಲಿ ಅರ್ಜಿಗಳನ್ನು ವಿತರಿಸುವುದಿಲ್ಲ ಹಾಗೂ ಅರ್ಜಿ ಸ್ವೀಕರಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2224098,2224301,2224274 ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.