ತಮ್ಮ ಡ್ರೈವ್‌ವೇನಲ್ಲಿ ಸಾಗುತ್ತಿದ್ದ ಅಮೆರಿಕದ ಉತ್ತರ ಕರೋಲಿನಾದ ಸಮ್ಮರ್‌ಫೀಲ್ಡ್‌ನ ಮೈಕ್ ಯೇಗರ್ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ಈ ವೇಳೆ ಅವರ ಆಪಲ್ ವಾಚ್‌ನಲ್ಲಿದ್ದ ’ಫಾಲ್ ಡಿಟೆಕ್ಷನ್ ಫೀಚರ್’ ಅವರ ಜೀವ ಉಳಿಸಿದೆ.
78 ವರ್ಷದ ಈ ವ್ಯಕ್ತಿ ಪ್ರಜ್ಞೆ ತಪ್ಪುವುದನ್ನು ಮೊದಲೇ ಗ್ರಹಿಸಿದ ಅವರ ಕೈಯಲ್ಲಿದ್ದ ಆಪಲ್ ವಾಚ್, ತನ್ನಿಂತಾನೇ 911ಗೆ ಕರೆ ಮಾಡಿದೆ. ಇಂತಿಷ್ಟು ವರ್ಷದ ಪುರುಷರೊಬ್ಬರು ಇಂಥ ಜಾಗದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಆಪಲ್ ವಾಚ್ ವರದಿಯನ್ನು ತನ್ನಿಂತಾನೇ ತುರ್ತು ಸೇವಾ ಘಟಕಕ್ಕೆ ರವಾನೆ ಮಾಡಿದೆ.
‘ಅನ್ ಲಾಕ್’ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಗ್ ಶಾಕ್: ಖಾಸಗಿ ಬಸ್ ಪ್ರಯಾಣ ದರ ಭಾರಿ ಏರಿಕೆ
ಕೂಡಲೇ ಸ್ಥಳಕ್ಕೆ ಧಾವಿಸಿದ ಸಮ್ಮರ್‌ಫಿಲ್ಡ್ ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದೆ.
“ಇದೊಂದು ದುಬಾರಿ ಸಾಧನ. ಆದರೆ ನೀವು 65 ವರ್ಷ ಮೇಲ್ಪಟ್ಟವರಾದರೆ ಇದನ್ನು ಖರೀದಿಸುವುದರಲ್ಲಿ ಅರ್ಥವಿದೆ. ನನಗೆ 78 ವರ್ಷ ವಯಸ್ಸು, ಅದಕ್ಕೆ ಅರ್ಹನಾಗಿರುವೆ” ಎನ್ನುತ್ತಾರೆ ಮೈಕ್.