ಆರೋಗ್ಯದ ಬಗ್ಗೆ ಅನೇಕ ಟ್ರ್ಯಾಕಿಂಗ್ ಫೀಚರ್‌ಗಳಿರುವ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಕೆಲವೇ ಕೆಲವು ವಾಚ್‌ಗಳು ಮಾತ್ರ ನಿಖರವಾಗಿ ಕೆಲಸ ಮಾಡುತ್ತವೆ. ಆಪಲ್ ವಾಚ್ ಈ ವಿಷಯದಲ್ಲಿ ಉಳಿದ ವಾಚ್‌ಗಳಿಗಿಂತ ಮುಂದಿದೆ. ಆಪಲ್ ವಾಚ್ ಯಾಕಿಷ್ಟು ಜನಪ್ರಿಯ ಅನ್ನೋದಕ್ಕೆ ಸಾಕ್ಷಿ ವಿಮಾನವೊಂದರಲ್ಲಿ ನಡೆದಿರುವ ಘಟನೆ. ಆಪಲ್ ವಾಚ್‌ನಿಂದಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಜೀವ ಉಳಿದಿದೆ.
ಏನಿದು ಘಟನೆ ?
70 ವರ್ಷದ ಬ್ರಿಟಿಷ್ ಮಹಿಳೆ ಇಟಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ವಿಮಾನ ಸಿಬ್ಬಂದಿ ಸಹಾಯ ಕೇಳಿದ್ದಾರೆ. ಅದೇ ವಿಮಾನದಲ್ಲಿದ್ದ ರಶೀದ್ ರಿಯಾಜ್ ಎಂಬ ವೈದ್ಯ ತಕ್ಷಣ ಆಪಲ್ ವಾಚ್ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಆಪಲ್ ವಾಚ್ ಮೂಲಕ ಬ್ಲಡ್ ಆಕ್ಸಿಜನ್ ಫೀಚರ್ ಅನ್ನು ಡಾಕ್ಟರ್ ರಶೀದ್ ಬಳಸಿದ್ರು. ಈ ಫೀಚರ್ ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಕೆಂಪು ರಕ್ತ ಕಣಗಳು ಸಾಗಿಸುವ ಆಮ್ಲಜನಕದ ಪ್ರಮಾಣವನ್ನು ಅಳೆಯುತ್ತದೆ. ಅದು ಕಡಿಮೆಯಿದ್ದಾಗ ಉಸಿರಾಟದ ಸಮಸ್ಯೆಗಳಾಗುತ್ತವೆ.
ರೋಗಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಪತ್ತೆ ಮಾಡಲು ಆಪಲ್ ವಾಚ್‌ನಿಂದಾಗಿ ಸಾಧ್ಯವಾಯಿತು. ಕೂಡಲೇ ಆನ್-ಬೋರ್ಡ್ ಆಮ್ಲಜನಕ ಸಿಲಿಂಡರ್ ಕೊಡುವಂತೆ ವೈದ್ಯರು ಸೂಚಿಸಿದ್ರು. ಸುಮಾರು ಒಂದು ಗಂಟೆಯ ನಂತರ ವಿಮಾನ ಇಟಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಅಲ್ಲಿಯವರೆಗೂ ಮಹಿಳೆಯ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಿ ಸ್ಥಿರಗೊಳಿಸಲಾಯ್ತು.