ಆಪಲ್ ವಾಚ್ ತನ್ನ ಜೀವ ಉಳಿಸುವ ಸಾಮರ್ಥ್ಯಗಳಿಗಾಗಿ ಪದೇ ಪದೇ ಮುಖ್ಯಾಂಶಗಳನ್ನು ಮಾಡುತ್ತಿದೆ. ಅದು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನುಹೊಂದಿದೆ. ಈ ಮೂಲಕ ರಕ್ತದ ಆಮ್ಲಜನಕ ಮತ್ತು ಹೃದಯದ ಬಡಿತವನ್ನು ಪರಿಶೀಲಿಸುತ್ತದೆ.
ಈಗ, ಆಪಲ್ ವಾಚ್ ಮಹಿಳೆಯೊಬ್ಬರನ್ನು ನಿದ್ದೆಯ ಮಧ್ಯದಲ್ಲಿ ಎಬ್ಬಿಸುವ ಮೂಲಕ ಮತ್ತು ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಎಚ್ಚರಿಸುವ ಮೂಲಕ ಆಕೆಯ ಜೀವವನ್ನು ಉಳಿಸಿದೆ.
ಅಮೆರಿಕದ ಸಿನ್ಸಿನಾಟಿಯ ನಿವಾಸಿ ಕಿಮ್ಮಿ ವಾಟ್ಕಿನ್ಸ್ ಎಂಬ ಮಹಿಳೆಯು ಅಸ್ವಸ್ಥಳಾಗಿದ್ದಳು, ತಲೆತಿರುಗುವಿಕೆಯನ್ನು ಅನುಭವಿಸುತ್ತಿದ್ದಳು. ಸುಸ್ತಾದ್ದರಿಂದ ಚಿಕ್ಕನಿದ್ರೆ ಮಾಡಲು ಬಯಸಿದಳು. ಆದಾಗ್ಯೂ, ಅವಳ ನಿದ್ರೆಗೆ ಸ್ವಲ್ಪ ಸಮಯದ ನಂತರ, ಆಕೆಯ ಆಪಲ್ ವಾಚ್ ಅಸಹಜವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಿತು, ಪ್ರತಿ ನಿಮಿಷಕ್ಕೆ ಸುಮಾರು 178 ಬಡಿತಗಳು ದಾಖಲಾಗಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರಿಂದ ಎಚ್ಚೆತ್ತುಕೊಂಡ ಆಕೆ ಸಕಾಲದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಜೀವ ಉಳಿಸಿಕೊಂಡಿದ್ದಾರೆ.