
ಪಕ್ಕದ ಕಾಫೀ ಅಂಗಡಿಯೊಂದರ ಗೋಡೆ ಕೊರೆದು ಆಪಲ್ ಸ್ಟೋರ್ ಒಳಗೆ ಬಂದ ಕಳ್ಳರು $500,000 (ನಾಲ್ಕು ಕೋಟಿ ರೂ.) ಮೌಲ್ಯದ ಐಫೋನ್‌ಗಳನ್ನು ಕದ್ದುಕೊಂಡು ಹೋದ ಘಟನೆ ವಾಷಿಂಗ್ಟನ್‌ನಲ್ಲಿ ಜರುಗಿದೆ.
ನಗರದ ಸಿಯಾಟಲ್ ಕಾಫಿ ಗೇರ್ ಎಂಬ ಅಂಗಡಿಯೊಂದರ ಗೋಡೆಗೆ ರಂಧ್ರವೊಂದನ್ನು ಕೊರೆದು ಆಪಲ್ ಸ್ಟೋರ್ ಒಳಗೆ ನುಗ್ಗಿದ್ದಾರೆ ಕಳ್ಳರು. ಇದಾದ ಬಳಿಕ ಸ್ಟೋರ್‌ನ ಭದ್ರತಾ ವ್ಯವಸ್ಥೆಯನ್ನು ವಂಚಿಸಲು ಸಫಲರಾದ ಕಳ್ಳರು ಒಟ್ಟಾರೆ 436 ಐಫೋನ್‌ಗಳನ್ನುಕದ್ದಿದ್ದಾರೆ.
ಕಾಫಿ ಶಾಪ್ ಮಾಲೀಕ ಎರಿಕ್ ಮಾರ್ಕ್ಸ್ ಈ ಕಳ್ಳತನದ ಕುರಿತು ಟ್ವೀಟ್ ಮಾಡಿದ್ದಾರೆ. ಕಾಫಿ ಶಾಪ್‌ನ ವಾಶ್‌ರೂಂನಲ್ಲಿ ಹೋಲ್ ಕೊರೆದು ಪಕ್ಕದ ಆಪಲ್ ಸ್ಟೋರ್‌ಗೆ ಕನ್ನ ಹಾಕಿದ್ದಾರೆ ಕಳ್ಳರು. ಘಟನೆಯ ಸಿಸಿಟಿವಿ ವಿಡಿಯೋ ತುಣುಕುಗಳನ್ನು ಪಡೆದಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.