ಇತ್ತೀಚೆಗಷ್ಟೇ ಐ ಫೋನ್ 14 ಬಿಡುಗಡೆ ಮಾಡಿರುವ ಆಪಲ್ ಕಂಪನಿ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಚೀನಾ ಬಳಿಕ ಸ್ಮಾರ್ಟ್ಫೋನ್ ಗಳಿಗೆ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ತನ್ನ ಐಫೋನ್ 14 ಉತ್ಪಾದನೆಯನ್ನು ಆರಂಭಿಸುತ್ತಿದೆ.
ಅಮೆರಿಕದ ಕ್ಯಾಲಿಫೋರ್ನಿಯ Cupertino ದಲ್ಲಿ ಮುಖ್ಯ ಕಚೇರಿ ಹೊಂದಿರುವ ಆಪಲ್ ಕಂಪನಿ, ಈಗಾಗಲೇ ಭಾರತದಲ್ಲಿ ಐಫೋನ್ ಎಸ್ಇ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಉತ್ಪಾದಿಸುತ್ತಿದೆ.
ಇದೀಗ ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಐಫೋನ್ 14 ಅಭಿವೃದ್ಧಿಪಡಿಸಿದ್ದು, ಇದನ್ನು ಭಾರತದಲ್ಲಿರುವ ತನ್ನ ಚೆನ್ನೈ ಘಟಕದಲ್ಲಿ ಉತ್ಪಾದನೆ ಮಾಡಲಿದೆ ಎಂದು ತಿಳಿದುಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಗ್ರಾಹಕರಿಗೆ ಈ ಐಫೋನ್ ಗಳು ಲಭ್ಯವಾಗಲಿದ್ದು, ವಿದೇಶಗಳಿಗೂ ಸಹ ಇಲ್ಲಿ ತಯಾರಾದ ಐಫೋನ್ ಗಳನ್ನು ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ.