ಸ್ಯಾನ್ ಫ್ರಾನ್ಸಿಸ್ಕೋ: ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (ಡಬ್ಲ್ಯುಡಬ್ಲ್ಯುಡಿಸಿ) 2022 ರಲ್ಲಿ, ವಾಚ್‌ಓಎಸ್ 9 ಅನ್ನು ಪ್ರೀಲಾಂಚ್ ರೂಪದಲ್ಲಿ ಅನಾವರಣ ಮಾಡಿದೆ. ಇದು ಸುಧಾರಿತ ವರ್ಕ್‌ಔಟ್ ಅಪ್ಲಿಕೇಶನ್, ನಿದ್ರೆಯ ಹಂತಗಳು, ಹೊಚ್ಚ ಹೊಸ ಅಫಿಬ್ ಇತಿಹಾಸ ವೈಶಿಷ್ಟ್ಯಗಳು ಸೇರಿ ವಿವಿಧ ವಿಶೇಷತೆ ಹೊಂದಿದೆ.
ಆಪಲ್ ವಾಚ್ ಬಳಕೆದಾರರಿಗೆ ಈಗ ಆಯ್ಕೆಗಾಗಿ ಹೆಚ್ಚಿನ ವಾಚ್ ಫೇಸ್‌ಗಳನ್ನು ಕಾಣುತ್ತಾರೆ. ಹೆಚ್ಚಿನ ಮಾಹಿತಿ ಮತ್ತು ವೈಯಕ್ತೀಕರಣಕ್ಕೂ ಇದು ಅವಕಾಶವನ್ನು ಒದಗಿಸುತ್ತದೆ. ಜಗತ್ತಿನಾದ್ಯಂತ ಬಳಕೆದಾರರು ಆಪಲ್ ವಾಚ್ ಅನ್ನು ಪ್ರೀತಿಸುತ್ತಾರೆ. ಪ್ರೀತಿಸುವವರೊಂದಿಗೆ ಸಂಪರ್ಕದಲ್ಲಿರಲು ಇದು ಅವರಿಗೆ ನೆರವಾಗುತ್ತದೆ.
ದಿನವಿಡೀ ಹೆಚ್ಚು ಸಕ್ರಿಯವಾಗಿದ್ದು ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಕಾರಿ ಎಂದು ಆಪಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ವಿಲಿಯಮ್ಸ್ ಹೇಳಿದ್ದಾರೆ.
ಫಿಟ್‌ನೆಸ್, ನಿದ್ರೆ ಮತ್ತು ಹೃದಯದ ಆರೋಗ್ಯಕ್ಕೆ ಸಂಬಂಧಿಸಿ ವೈಜ್ಞಾನಿಕ ಒಳನೋಟಗಳೊಂದಿಗೆ ವಾಚ್‌ಓಎಸ್ 9 ಆಪಲ್ ವಾಚ್ ಬಳಕೆದಾರರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಅಪ್ಡೇಟ್ ಮಾಡಲಾದ ವರ್ಕ್‌ಔಟ್ ಅಪ್ಲಿಕೇಶನ್‌ನಲ್ಲಿ, ಉನ್ನತ- ಕಾರ್ಯನಿರ್ವಹಣೆಯ ಕ್ರೀಡಾಪಟುಗಳಿಗೆ ಅಗತ್ಯ ಸುಧಾರಿತ ಮೆಟ್ರಿಕ್, ವೀಕ್ಷಣೆ ಮತ್ತು ತರಬೇತಿ ಅನುಭವಗಳನ್ನೂ ಈ ಮೂಲಕ ಪಡೆಯಬಹುದು ಎಂದು ವಿಲಿಯಮ್ಸ್ ವಿವರಿಸಿದರು.
ವಾಚ್ಓಎಸ್ 9 ಸ್ಲೀಪ್ ಅಪ್ಲಿಕೇಶನ್‌ಗೆ ನಿದ್ರೆಯ ಹಂತಗಳನ್ನು ಜೋಡಿಸಿದೆ. ಅಲ್ಲದೆ ಹೊಸ ಎಫ್‌ಡಿಎ- ತೆರವುಗೊಳಿಸಿದ ಎಫಿಬ್ ಹಿಸ್ಟರಿ ವೈಶಿಷ್ಟ್ಯವು ಬಳಕೆದಾರರ ಸ್ಥಿತಿಯ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ವಾಚ್‌ಒಎಸ್9 ಜುಲೈನಲ್ಲಿ beta.apple.com ಮೂಲಕ ಬಳಕೆದಾರರಿಗೆ ಸಾರ್ವಜನಿಕ ಬೀಟಾ ರೂಪದಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.