alex Certify 12 ಸಾವಿರ ರೂ. ರಿಯಾಯಿತಿಯಲ್ಲಿ ಪಡೆಯಿರಿ ನಿಮ್ಮಿಷ್ಟದ ಆಪಲ್​ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ಸಾವಿರ ರೂ. ರಿಯಾಯಿತಿಯಲ್ಲಿ ಪಡೆಯಿರಿ ನಿಮ್ಮಿಷ್ಟದ ಆಪಲ್​ ಫೋನ್


ಐ ಫೋನ್​ ಖರೀದಿ ಮಾಡಬೇಕು ಎಂಬ ಯೋಚನೆಯಲ್ಲಿದ್ದೀರೇ..? ಹಾಗಾದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ನೀವು ಈ ಆಸೆಯನ್ನು ಈಡೇರಿಸಿಕೊಳ್ಳಬಹುದಾಗಿದೆ. ವಿಜಯ್ ಸೇಲ್ಸ್ ಆಗಸ್ಟ್​ 15ರವರೆಗೆ ಆಪಲ್​​ ಡೇಸ್​ ಕ್ಯಾಂಪೇನ್​ ಸೇಲ್​ ನಡೆಸುತ್ತಿದೆ. ಈ ಸೇಲ್​ನ ಮೂಲಕ ನೀವು ಐ ಫೋನ್​ 12 ಅನ್ನು 67,400 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

ಅಂದಹಾಗೆ ಐ ಫೋನ್​ 12ನ ಮೂಲಬೆಲೆ 79,900 ರೂಪಾಯಿ ಆಗಿದೆ. ಆದರೆ ಈ ಸೇಲ್‌ ​ನ ಮೂಲಕ ನೀವು 10 ಸಾವಿರ ರೂಪಾಯಿ ರಿಯಾಯಿತಿ ಪಡೆಯಲಿದ್ದೀರಿ.

ಐ ಫೋನ್​ 12 ಮೊಬೈಲ್​ 6.1 ಇಂಚು ಸೂಪರ್​​ ರೆಟಿನಾ ಎಕ್ಸ್​ಡಿಆರ್​​​ ಡಿಸ್​ಪ್ಲೇ ಹಾಗೂ ಒಲಿಯೊಫೋಬಿಕ್ ಕೋಟಿಂಗ್​ ನ್ನು ಹೊಂದಿದೆ. ಇದು ಆಪಲ್​​ ಎ 14 ಪ್ರೊಸೆಸರ್​ ಬಳಸುತ್ತಿದ್ದರು. ಇದರ ಜೊತೆಯಲ್ಲಿ ಐಓಎಸ್​ 14.7 ಇದೆ. ಆದರೆ ಮುಂದಿನ ನಾಲ್ಕು ವರ್ಷಗಳ ಕಾಲ ಸಾಫ್ಟ್​ವೇರ್​ ಅಪ್​ಗ್ರೇಡ್ ಹೊಂದಿರಲಿದೆ.

ಇನ್ನು ಸೆಲ್ಫಿ ಹಾಗೂ ವಿಡಿಯೋಗಳ ಬಗ್ಗೆ ಮಾತನಾಡೋದಾದ್ರೆ ಐ ಫೋನ್​ 12ನಲ್ಲಿ 12 ಮೆಗಾ ಪಿಕ್ಸೆಲ್​ ಸಾಮರ್ಥ್ಯದ ಡ್ಯುಯಲ್​ ಕ್ಯಾಮರಾ ಇದ್ದು, ಇದು ಡಾಲ್ಬಿ ವಿಶನ್​ನಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ಹೊಸದಾಗಿ ಬಂದ ನೇರಳೆ ಬಣ್ಣ ಸೇರಿದಂತೆ ಐ ಫೋನ್​ 12 ಸಾಕಷ್ಟು ಬಣ್ಣದಲ್ಲಿ ಲಭ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...