ಪ್ರಪಂಚದಾದ್ಯಂತ ಆಹಾರ ಪ್ರಿಯರು, ವಿಭಿನ್ನ ಶೈಲಿಯ ಹೊಸ ತರಹದ ಖಾದ್ಯ ಸವಿಯಲು ಇಷ್ಟಪಡುತ್ತಾರೆ. ಅದೇ ರೀತಿ ಸ್ಟ್ರೀಟ್ ಫುಡ್ ಅನ್ನು ಇಷ್ಟಪಡದವರು ಯಾರು ಹೇಳಿ..? ಅದ್ರಲ್ಲೂ ಗೋಲ್ಗಪ್ಪಾ ಅಂದ್ರೆ ಬಹುತೇಕರು ಇಷ್ಟಪಡುವ ತಿನಿಸಾಗಿದೆ.
ಈ ಗೋಲ್ಗಪ್ಪಾಗೆ ಇಲ್ಲೊಂದೆಡೆ ಹೊಸ ಟಚ್ ಕೊಟ್ಟಿದ್ದು, ಇಂಟರ್ನೆಟ್ ನಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ.
ಡೆವ್ಲಿನಾ ಎಂಬುವವರು ಟ್ವಿಟ್ಟರ್ ನಲ್ಲಿ ‘ಬಟರ್ ಚಿಕನ್ ಗೋಲ್ಗಪ್ಪಾ’ ಎಂಬ ಖಾದ್ಯದ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಹೆಸರೇ ಸೂಚಿಸುವಂತೆ, ಇದು ದೆಹಲಿಯಲ್ಲಿ ಪ್ರಸಿದ್ಧವಾದ ಕ್ಲಾಸಿಕ್ ಚಿಕನ್ ಖಾದ್ಯ ಮತ್ತು ಜನಪ್ರಿಯ ಬೀದಿ ತಿಂಡಿಯನ್ನು ತಯಾರಿಸುತ್ತದೆ. ಜೊತೆಗೆ ಭರ್ತಿ ರುಚಿಕರವಾದ ಗ್ರೇವಿಯನ್ನು ಹೊಂದಿದೆ.
ಕೊರೊನಾ 3ನೇ ಅಲೆ ಭೀತಿ; ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ
ಸದ್ಯ, ಬಟರ್ ಚಿಕನ್ ಗೋಲ್ಗಪ್ಪಾ ದ ಫೋಟೋ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿದ್ದು, ಕೆಲವರು ಅಸಹ್ಯಕರ, ಯಾವತ್ತೂ ಟೇಸ್ಟ್ ನೋಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು ಈ ಸ್ಪೆಷಲ್ ಗೋಲ್ಗಪ್ಪಾ ಸವಿಯಲು ಉತ್ಸುಕರಾಗಿದ್ದಾರೆ.
https://twitter.com/AarKiBolboBolo/status/1441624906244902918?ref_src=twsrc%5Etfw%7Ctwcamp%5Etweetembed%7Ctwterm%5E1441624906244902918%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fapocalypse-is-near-photo-of-butter-chicken-golgappe-goes-viral-appalled-netizens-react%2F817233