ಬೆಂಗಳೂರು: ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಅವರ ಧ್ವನಿಯನ್ನು ಚಿರಸ್ಥಾಯಿಯನ್ನಾಗಿ ಮಾಡಲು ಬಿಎಂಆರ್ ಸಿ ಎಲ್ ಹೊಸ ಚಿಂತನೆ ನಡೆಸಿದೆ.
ಈ ನಿಟ್ಟಿನಲ್ಲಿ AI ತಂತ್ರಜ್ಞಾನದ ಮೂಲಕ ಅಪರ್ಣಾ ಅವರ ಧ್ವನಿಯನ್ನೇ ಹೊಸ ಮೆಟ್ರೋ ಮಾರ್ಗಗಳಿಗೂ ಉಳಿಸಿಕೊಳ್ಳಲು ತೀರ್ಮಾನಿಸಿದೆ. ನಮ್ಮ ಮೆಟ್ರೋದ ಉದ್ಘೋಷಣೆಗಳ ಹಿಂದಿನ ಧ್ವನಿಯಾಗಿದ್ದ ಅಪರ್ಣಾ, ಈಗಿರುವ ಎಲ್ಲಾ ಮೆಟ್ರೋ ಮಾರ್ಗಗಳಲ್ಲಿಯೂ ಅವರ ಧ್ವನಿಯಲ್ಲಿಯೇ ಅನೌನ್ಸ್ ಮೆಂಟ್ ಗಳು ಬರುತ್ತಿವೆ. ಮುಂಬರುವ ಮೆಟ್ರೋ ಹಳದಿ ಮಾರ್ಗಕ್ಕೂ ಅವರ ಧ್ವನಿಯನ್ನೇ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋದಲ್ಲಿ ಅಪರ್ಣಾ ಅವರ ಧ್ವನಿಯನ್ನೇ ಯಾವಾಗಲೂ ಇರುವಂತೆ ಮಾಡಿ ಎಂದು ನಟ ಸೃಜನ್ ಲೋಕೇಶ್ ಕೂಡ ಬಿಎಂಆರ್ ಸಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮನವಿ ಮಾಡಿದ್ದರು. ಅಲ್ಲದೇ ಸ್ವತಃ ಬಿಎಂಆರ್ ಸಿ ಎಲ್ ಕೂಡ ಎಐ ತಂತ್ರಜ್ಞಾನದ ಮೂಲಕ ಮೆಟ್ರೋ ಹಳದಿ ಮಾರ್ಗಕ್ಕೂ ಅಪರ್ಣಾ ಅವರ ಧ್ವನಿಯಲ್ಲಿಯೇ ಮೆಟ್ರೋ ಉದ್ಘೋಷಗಳು ಹೊರಹೊಮ್ಮುವಂತೆ ಮಾಡುವ ಬಗ್ಗೆ ಚರ್ಚೆ ನಡೆಸಿದೆ.