ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ವೈ.ಎಸ್.ಆರ್.ಸಿ.ಪಿ. ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಜುಲೈ 9 ರಂದು ಯುವಜನ ಶ್ರಮಿಕ ರೈತ ಕಾಂಗ್ರೆಸ್(YSRC) ನ ‘ಜೀವಮಾನದ ಅಧ್ಯಕ್ಷರಾಗಿ’ ಜಗನ್ ಅವರು ಆಯ್ಕೆಯಾದರು. ಪಕ್ಷದ ಸಂವಿಧಾನದ ತಿದ್ದುಪಡಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪಕ್ಷದ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರು, ಜಗನ್ ಮೋಹನ್ ರೆಡ್ಡಿ ಅವರನ್ನು ವೈ.ಎಸ್.ಆರ್.ಸಿ.ಪಿ.ಯ ಆಜೀವ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಜೂನ್ 8 ರಂದು, ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ತಾಯಿ ವಿಜಯಮ್ಮ ಅವರು ತೆಲಂಗಾಣದಲ್ಲಿ ತಮ್ಮ ಪುತ್ರಿ ವೈ.ಎಸ್. ಶರ್ಮಿಳಾ ಅವರಿಗೆ ನೆರವಾಗಲು ವೈ.ಎಸ್.ಆರ್.ಸಿ.ಪಿ. ಗೌರವಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಹೇಳಿದ್ದರು.