ಡಿಸೆಂಬರ್ 11 ರಿಂದ ‘ಅಯೋಗ್ಯ 2’ ಶೂಟಿಂಗ್ ಆರಂಭ 03-12-2024 11:45AM IST / No Comments / Posted In: Featured News, Live News, Entertainment ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ’ 2018 ರಂದು ತೆರೆ ಕಂಡು ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿತ್ತು, ಈ ಚಿತ್ರದ ಮುಂದುವರೆದ ಭಾಗ ‘ಅಯೋಗ್ಯ 2’ ಮೇಲೆ ಕೂಡ ಸಾಕಷ್ಟು ನಿರೀಕ್ಷೆ ಮೂಡಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 11 ರಿಂದ ಶೂಟಿಂಗ್ ಪ್ರಾರಂಭಿಸುವುದಾಗಿ ನಟ ಸತೀಶ್ ನೀನಾಸಂ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದು, ”ಮತ್ತೆ ಬತ್ತಾವ್ನೆ ಕಲ ಅಯೋಗ್ಯ ನೀವ್ ಆಶೀರ್ವಾದ ಮಾಡ್ಬುಟ್ರೆ ಅದೇ ನಮ್ ಭಾಗ್ಯ” ಎಂದು ಬರೆದುಕೊಂಡಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, svc ಫಿಲಂಸ್ ಬ್ಯಾನರ್ ನಲ್ಲಿ ಮುನೇಗೌಡ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.