ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇವರನ್ನ ನೋಡ್ತಿದ್ರೆ ʼಮೇಡ್ ಫಾರ್ ಈಚ್ ಅದರ್ʼ ಅಂತ ಎಂಥವರಿಗೂ ಅನ್ಸೇ ಅನ್ನುತ್ತೆ. ಪ್ರೀತಿಸಿ ಮದುವೆ ಆದ ಈ ಜೋಡಿಗೆ ವಮಿಕಾ ಅನ್ನೊ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತಿಚೆಗೆ ವೈರಲ್ ಆಗಿರೋ ವಿಡಿಯೋ ನೋಡ್ತಿದ್ರೆ ಈಗ ಇವರ ಮನೆಗೆ ಮತ್ತೊಂದು ಹೊಸ ಪುಟಾಣಿ ಅತಿಥಿ ಬರುವ ಹಾಗೆ ಕಾಣಿಸುತ್ತಿದೆ.
ಐಪಿಎಲ್ ನಿಂದ ಕೊಂಚ ವಿರಾಮ ಸಿಗ್ತಿದ್ದ ಹಾಗೆಯೇ ವಿರಾಟ್ ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಅಲ್ಲಿ ಹೋಗಿ ಎಂಜಾಯ್ ಮಾಡ್ತಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲಿಂದ ಬಂದ ಮೇಲೆ ವಿರಾಟ್ ಮತ್ತು ಅನುಷ್ಕಾ ಮುಂಬಯಿಯಲ್ಲಿ ಇರುವ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಅವರಿಬ್ಬರು ಹಾಗೆ ಒಮ್ಮಿಂದೊಮ್ಮೆ ಆಸ್ಪತ್ರೆಗೆ ಹೋಗಿರೋದನ್ನ ನೋಡ್ತಿದ್ರೆ ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೆ ಅನ್ನೋ ಅನುಮಾನ ಹುಟ್ಟಿದೆ.
ಆಸ್ಪತ್ರೆಯಿಂದ ಹೊರಬಂದು ರೇಂಜ್ ರೋವರ್ ಕಾರಿನಲ್ಲಿ ಹೋಗುತ್ತಿರುವುದನ್ನ ಅಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ಅದನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇವರ ರೂಟಿನ್ ಚೆಕಪ್ ಆಗಿರಬಹುದು ಅಥವಾ ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೋ ಏನೋ ಅಂತ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿನ ದಿಗ್ಗಜರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡಾ ಹೆಸರನ್ನ ಕೇಳಬಹುದಾಗಿದೆ. ಅದೇ ರೀತಿ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ಸ್ ಲಿಸ್ಟ್‌ನಲ್ಲಿ ಅನುಷ್ಕಾ ಶರ್ಮಾ ಹೆಸರು ಕೂಡಾ ಒಂದಾಗಿದೆ. ಈಗಾಗಲೇ ಒಂದು ಮುದ್ದಾದ ಮಗಳ ತಂದೆ-ತಾಯಿ ಆಗಿರೋ ಈ ಜೋಡಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೊ ಸುದ್ದಿ ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಈಗಲೇ ಹೇಳುವುದು ಅಸಾಧ್ಯ. ಆದರೆ ಈ ಸುದ್ದಿ ಏನಾದರೂ ನಿಜವೇ ಆಗಿದ್ದಲ್ಲಿ ವಿರುಷ್ಕಾ ಅಭಿಮಾನಿಗಳಿಗಂತೂ ಇದು ಒಂದು ಗುಡ್ ನ್ಯೂಸ್ ಅಂದ್ರೂ ತಪ್ಪಾಗಲಿಕ್ಕಿಲ್ಲ.