ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಮಗುವಿಗೆ ಜನ್ಮ ನೀಡಿದ ನಂತ್ರ ಎಲ್ಲರಂತೆ ನಟಿಗೂ ಕೂದಲುದುರುವ ಸಮಸ್ಯೆ ಎದುರಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅನುಷ್ಕಾ ಈ ಬಗ್ಗೆ ಬರೆದುಕೊಂಡಿದ್ದಾರೆ. ಕೂದಲು ಉದುರುತ್ತಿರುವ ಕಾರಣ ಹೇರ್ ಕಟ್ ಅನಿವಾರ್ಯವಾಗಿದೆ ಎಂದು ಬರೆದಿದ್ದಾರೆ. ಅನುಷ್ಕಾಗೆ ಮಾತ್ರವಲ್ಲ ಹೆರಿಗೆ ನಂತ್ರ ಎಲ್ಲ ಮಹಿಳೆಯರೂ ಕೂದಲುದುರುವ ಸಮಸ್ಯೆ ಎದುರಿಸುತ್ತಾರೆ. ಕೆಲವೊಂದು ನೈಸರ್ಗಿಕ ಆರೈಕೆ ಮೂಲಕ ಕೂದಲುದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಟಿ-20 ವಿಶ್ವಕಪ್: ನವೆಂಬರ್ 14ರಂದು ನಡೆಯಲಿದೆ ಫೈನಲ್ ಹಣಾಹಣಿ
ಗರ್ಭಿಣಿಯರು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಹೆರಿಗೆ ನಂತ್ರವೂ ಇದನ್ನು ಮುಂದುವರೆಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ದ್ರವ ಆಹಾರ ಸೇವನೆ ಮಾಡಬೇಕು. ಹಣ್ಣು, ಹಸಿರು ಸೊಪ್ಪು, ತರಕಾರಿ, ಸಿಹಿ ಆಲೂಗಡ್ಡೆ, ಅಗಸೆಬೀಜ, ಮೊಟ್ಟೆ, ಮೀನು, ಬೀನ್ಸ್, ಸೋಯಾ ನಿಮ್ಮ ಡಯಟ್ ನಲ್ಲಿರಲಿ.
ಮೆಂತ್ಯ ಬೀಜಗಳು ಕೂದಲು ಉದುರುವುದನ್ನು ತಡೆಯಲು ಉತ್ತಮ ಮದ್ದು. ಸ್ವಲ್ಪ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಈ ನೀರನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ ಕೆಲವು ಗಂಟೆಗಳ ಕಾಲ ಬಿಟ್ಟು ನಂತ್ರ ತಲೆ ಸ್ನಾನ ಮಾಡಿ. ವಾರದಲ್ಲಿ ಎರಡು ಮೂರು ಬಾರಿ ಮಾಡಬೇಕು. ಮೆಂತ್ಯ ಬೀಜಗಳನ್ನು ನೆನೆಸಿ, ಪುಡಿಮಾಡಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಬಹುದು. 20 ನಿಮಿಷಗಳ ನಂತ್ರ ಸ್ವಚ್ಛಗೊಳಿಸಬೇಕು.
ಬಹುಭಾಷಾ ನಟಿ ವೇದಿಕಾ ಲೇಟೆಸ್ಟ್ ಫೋಟೋ ಶೂಟ್
ಮೊಸರು ಕೂದಲಿಗೆ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಮೊಸರಿನ ಮಸಾಜ್ ಕೂದಲನ್ನು ಬಲಪಡಿಸುತ್ತದೆ. ಹೊಸ ಕೂದಲು ಬೆಳೆಯಲು ಸಹಕಾರಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ತಲೆಗೆ ಮೊಸರು ಹಚ್ಚಿ 15 ನಿಮಿಷ ಬಿಡಬೇಕು. ನಂತ್ರ ತಲೆ ಸ್ನಾನ ಮಾಡಬೇಕು.