ಭಾರತೀಯ ಕ್ರಿಕೆಟ್‌ನ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ ಮಗಳು ವಮಿಕಾಳ ಮೊದಲೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪುಟ್ಟದೊಂದು ಪಾರ್ಟಿ ಹಮ್ಮಿಕೊಳ್ಳಲಾಗಿತ್ತು.
ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ದಿನದಾಟ ಅಂತ್ಯಗೊಂಡ ಬೆನ್ನಿಗೆ ಈ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಮಗಳ ಹುಟ್ಟುಹಬ್ಬದ ದಿನವೇ ಉತ್ತಮ ಬ್ಯಾಟಿಂಗ್ ಮೂಲಕ 79 ರನ್ ಗಳಿಸಿ, ಕಳೆದುಕೊಂಡಿರುವ ಫಾರಂಗೆ ಮರಳುವ ವಿಶ್ವಾಸ ಕಂಡುಕೊಂಡಿದ್ದಾರೆ ವಿರಾಟ್ ಕೊಹ್ಲಿ.
ಕೊರೋನಾ ಹೆಚ್ಚಳ ಹಿನ್ನೆಲೆ; ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ಗುಡ್ ನ್ಯೂಸ್
ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಮಡದಿ ರೋಮಿ ಮಿತ್ರಾ ಈ ಪಾರ್ಟಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮುಕ್ತವಾದ ಸೆಟ್‌ಅಪ್ ಒಂದರಲ್ಲಿ ವಿರುಷ್ಕಾ ದಂಪತಿ ತಮ್ಮ ಮುದ್ದಿನ ಮಗಳ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದಾಗಿ ರೋಮಿ ತಿಳಿಸಿದ್ದು, ಅದರ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿರ ಜೀವನಚರಿತ್ರೆ ಆಧರಿತ ಚಿತ್ರ ’ಚಕ್ಡಾ ಎಕ್ಸ್‌ಪ್ರೆಸ್’ನಲ್ಲಿ ಮುಂಚೂಣಿ ಪಾತ್ರದಲ್ಲಿ ನಟಿಸಲಿರುವ ಅನುಷ್ಕಾ, ತಮ್ಮ ನಟನಾ ವೃತ್ತಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ.