
ಹರ್ಷಿತ್ ಸೋಮೇಶ್ವರ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶೋಭರಾಜ್ ಪಾವೂರ್ ಸೇರಿದಂತೆ ಮಧುರ ಆರ್ಜೆ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಬಣ್ಣ ಹಚ್ಚಿದ್ದಾರೆ. ಲಕುಮಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಯಶೋಧ ಸಂಜೀವ ಹಾಗೂ ಲಂಚು ಲಾಲ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಸುವರ್ಣ ಸಂಕಲನ, ಅರುಣ್ ರಾಯ್ ಪುತ್ತೂರು ಹಾಗೂ ಅನಿಲ್ ಕುಮಾರ್ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ರೋಹಿತ್ ಪೂಜಾರಿ ಸಂಗೀತ ಸಂಯೋಜನೆ ನೀಡಿದ್ದಾರೆ.