ಸಿನಿಮಾಗಳಿಗಿಂತ ಧಾರಾವಾಹಿ ಕಲಾವಿದರು ಜನರಿಗೆ ಹೆಚ್ಚು ಹತ್ತಿರವಾಗಿರ್ತಾರೆ. ಪ್ರತಿ ದಿನ ಟಿವಿ ಪರದ ಮೇಲೆ ಬರುವ ಕಲಾವಿದರನ್ನು ಮನೆಯ ಸದಸ್ಯನಂತೆ ಅಭಿಮಾನಿಗಳು ನೋಡ್ತಾರೆ. ಹಿಂದಿ ಧಾರಾವಾಹಿ ‘ಅನುಪಮಾ’ ಕೂಡ ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿ ಅಭಿಮಾನಿಗಳಿಗೆ ನೋವಿನ ಸಂಗತಿಯೊಂದಿದೆ.
ಒಂದು ಕಾಲದಲ್ಲಿ ಅನುಪಮಾ ಅಂದರೆ ರೂಪಾಲಿ ಗಂಗೂಲಿ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದ ಮಾಧವಿ ಗೋಗಟೆ ನಿಧನರಾಗಿದ್ದಾರೆ. ಅನುಪಮಾ ಟಿವಿ ಶೋನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ಮಾಧವಿ ಗೋಗಟೆ ನಿಧನರಾಗಿದ್ದಾರೆ. ನಟಿಗೆ ಕೊರೊನಾ ಆಗಿತ್ತು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 21 ರಂದು ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ವಿಷ್ಯವನ್ನು ರೂಪಾಲಿ ಗಂಗೂಲಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಮಾಧವಿ ವಯಸ್ಸು 58 ವರ್ಷ. ಸ್ನೇಹಿತ ನೀಲು ಕೊಹ್ಲಿ ಕೂಡ ಮಾಧವಿ ಆತ್ಮಕ್ಕೆ ಶಾಂತಿ ಕೋರಿ, ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಮಾಧವಿ ಗೋಗಟೆ, ಏಕ್ತಾ ಕಪೂರ್ ಸೇರಿದಂತೆ ಅನೇಕ ದಿಗ್ಗಜರ ಧಾರಾವಾಹಿಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅವರ ನಿಧನಕ್ಕೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.