17ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಎರಡು ಜೊತೆ ಕನ್ನಡಕಗಳು ಹರಾಜಿನಲ್ಲಿ $3.5 ದಶಲಕ್ಷಕ್ಕೆ (25 ಕೋಟಿ ರೂಪಾಯಿ) ಬಿಕರಿಯಾಗುವ ಸಾಧ್ಯತೆ ಇದೆ.
ಆಭರಣ ಲೇಪಿತವಾದ ಈ ಕನ್ನಡಕಗಳು ವಜ್ರ ಹಾಗೂ ಹವಳಗಳನ್ನು ಹೊಂದಿವೆ. ಆದರೆ ಹರಾಜಿನಲ್ಲಿ ಭಾರೀ ಬೆಲೆ ಸಿಗಲು ಇದಕ್ಕಿಂತ ಇನ್ನಷ್ಟು ಕಾರಣಗಳಿವೆ.
ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು
ಹರಾಜುದಾರ ಸೋಥೆಬೆನ್ ಪ್ರಕಾರ, ಈ ಕನ್ನಡಕಗಳು ಮೊಘಲ್ ಕಾಲಕ್ಕೆ ಸೇರಿವೆ ಎಂದು ತಿಳಿದುಬಂದಿದೆ. ಈ ಕನ್ನಡಕಗಳನ್ನು ಧರಿಸಿದರೆ ’ಕೆಟ್ಟ ಶಕ್ತಿಗಳು’ ದೂರ ಹೋಗಿ, ಉನ್ನತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇತ್ತಂತೆ.
’ಹಾಲೋ ಆಫ್ ಲೈಟ್’ ಎಂಬ ಲೆನ್ಸ್ ಹೊಂದಿರುವ ಒಂದು ಕನ್ನಡಕವನ್ನು ಗೋಲ್ಕೊಂಡಾದಲ್ಲಿ 200 ಕ್ಯಾರೆಟ್ ವಜ್ರದಿಂದ ರಚಿತವಾಗಿದೆ ಎಂದು ನಂಬಲಾಗಿದೆ. ಮತ್ತೊಂದು ಕನ್ನಡಕದ ಗಾಜುಗಳು ಹಸಿರು ಬಣ್ಣದ್ದಾಗಿದ್ದು, ’ಗೇಟ್ ಆಫ್ ಪ್ಯಾರಡೈಸ್’ ಎಂದು ಕರೆಯಲಾಗುತ್ತದೆ.
“ಈ ಗಾತ್ರ ಹಾಗೂ ಮೌಲ್ಯದ ಯಾವುದೇ ಆಭರಣದ ಕಲ್ಲನ್ನು ಮೊದಲು ಮೊಘಲರ ದರ್ಬಾರಿಗೆ ತರಲಾಗುತ್ತಿತ್ತು” ಎಂದು ಸೋಥೆಬೆನ್ ಮಧ್ಯ ಪೂರ್ವ ಹಾಗೂ ಭಾರತದ ವಿಭಾಗದ ಚೇರ್ಮನ್ ಎಡ್ವರ್ಡ್ ಗಿಬ್ಸ್ ತಿಳಿಸಿದ್ದಾರೆ.