ಚಿಕ್ಕಮಗಳೂರು: ನಕ್ಸಲ್ ನಿಗ್ರಹ ಪಡೆಗಳು ನಡೆಸಿದ ತೀರ್ಥಹಳ್ಳಿ ತಾಲೂಕಿನ ಬರ್ಕಣ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಚಿಕ್ಕಮಗಳೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ನೀಲಗುಳಿ ಪದ್ಮನಾಭ, ರಿಜ್ವಾನ್ ಬೇಗಂ, ಬಿ.ಜಿ. ಕೃಷ್ಣಮೂರ್ತಿ ಅವರ ಮೇಲೆ ಪೊಲೀಸರು ಹೂಡಿದ್ದ ಮೊಕದ್ದಮೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದ ವಿಚಾರಣೆ ಸುಮಾರು ಎಂಟು ವರ್ಷಗಳ ಕಾಲ ನಡೆದಿತ್ತು. ನೀಲಗುಳಿ ಪದ್ಮನಾಭ ಮತ್ತು ತಂಡದವರ ಪರವಾಗಿ ಹಿರಿಯ ವಕೀಲರಾದ ಲಕ್ಷ್ಮಣಗೌಡ ಅವರು ವಾದ ಮಂಡಿಸಿದ್ದರು.