ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಶ್ರೀಮಂತರಾಗುವುದು ಹೇಗೆ…? ಇಲ್ಲಿದೆ ಸಂಪತ್ತು ಹೊಂದುವ ಸುಲಭ ಮಾರ್ಗಗಳ ಮಾಹಿತಿ
ಅನೆಸ್ತೇಷಿಯಾಲಜಿ 2021ರ ವಾರ್ಷಿಕ ಸಭೆಯಲ್ಲಿ ಅಧ್ಯಯನದ ವಿವರಗಳನ್ನು ಪ್ರಸ್ತುತಪಡಿಸಲಾಗಿದ್ದು, ಕ್ಯಾನ್ಸರ್ ಸರ್ಜರಿಯಾದ ಮೂರು ತಿಂಗಳ ಬಳಿಕ, ಡೆಕ್ಸಾಮೆಥಾಸೋನ್ ಮಾತ್ರೆ ತೆಗೆದುಕೊಂಡ ಮಂದಿ ಈ ಮಾತ್ರೆ ತೆಗೆದುಕೊಳ್ಳದೇ ಇರುವ ಮಂದಿಗಿಂತ ಮೂರು ಪಟ್ಟು ಹೆಚ್ಚು ಬದುಕುವ ಸಾಧ್ಯತೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
“ಡೆಕ್ಸಾಮೆಥಸೋನ್ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳೆರಡನ್ನೂ ಹೊಂದಿದೆ. ಇದು ಕ್ಯಾನ್ಸರ್ ಬೆಳವಣಿಗೆ ತಡೆಗಟ್ಟುತ್ತದೆ, ಆದರೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ” ಎಂದು ಬೋಸ್ಟನ್‌ನ ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯ ಮ್ಯಾಕ್ಸಿಮಿಲನ್ ಶೇಫರ್ ತಿಳಿಸಿದ್ದಾರೆ.
ಬೀಚ್ ಲುಕ್ ನ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಸೋಫಿ ಚೌಧರಿ
ಸ್ತನ, ಗರ್ಭಾಶಯ, ಓವರಿ, ಇಸೋಫೇಗಸ್, ಪ್ಯಾಂಕ್ರಿಯಾಸ್, ಥೈರಾಯ್ಡ್, ಮೂಳೆಗಳು ಹಾಗೂ ಜಂಟಿಗಳ ಕ್ಯಾನ್ಸರ್‌ಗೆ ಪ್ರಬಲ ರೋಗ ನಿರೋಧಕ ಶಕ್ತಿಯ ಪ್ರತಿಕ್ರಿಯೆ ತೋರದ ಮಂದಿಯಲ್ಲಿ ಡೆಕ್ಸಾಮೆಥಸೋನ್ ಮಧ್ಯಂತರದಿಂದ ದೀರ್ಘಾವಧಿವರೆಗೂ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನ ತಂಡ ಕಂಡುಕೊಂಡಿದೆ.
ಕಿಮೋಥೆರಪಿ ವೇಳೆ ಮಾಡಲಾಗುವ ಸರ್ಜರಿ ಸಂದರ್ಭದಲ್ಲಿ ವಾಂತಿಯಾಗದಂತೆ ನೋಡಿಕೊಳ್ಳಲು ಡೆಕ್ಸಾಮೆಥಸೋನ್ ಮಾತ್ರೆಯನ್ನು ನೀಡಲಾಗುತ್ತದೆ.