ದೆಹಲಿಯ ಜಂತರ್ ಮಂತರ್ ಬಳಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಆಪಾದನೆ ಮೇಲೆ ಬಿಜೆಪಿ ನಾಯಕ ಅಶ್ವನಿ ಉಪಾಧ್ಯಾಯ ಹಾಗೂ ಇತರ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಗೆ ಒಳಪಡಿಸಿದ್ದಾರೆ.
“ಭಾನುವಾರದಂದು ಕೋಮು ದ್ವೇಷದ ಪ್ರಚೋದನೆ ನೀಡುವ ಹೇಳಿಕೆಗಳನ್ನು ಕೊಡುತ್ತಿದ್ದ ಅಶ್ವನಿ ಉಪಾಧ್ಯಾಯ ಮತ್ತುವರ ಸಂಗಡಿಗರನ್ನು ಬಂಧಿಸಲಾಗುವುದು. ದೆಹಲಿ ಪೊಲೀಸ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆಗಳನ್ನು ಸಹಿಸುವುದಿಲ್ಲ,” ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
BIG NEWS: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ; ಮೂವರು ಆರೋಪಿಗಳು ಕೋರ್ಟ್ ಗೆ ಹಾಜರು
ಮುಸ್ಲಿಂ ವಿರೋಧಿ ಘೋಷಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಂತರ್ ಮಂತರ್ ಬಳಿ ಆಯೋಜಿಸಲಾಗಿದ್ದ ಭಾರತ್ ಜೋಡೋ ಅಭಿಯಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದು, ಹೀಗೆ ಜಮಾಯಿಸಲು ಯಾವುದೇ ಅನುಮತಿ ಪಡೆಯದೇ ಪ್ರಚೋದನಾಕಾರಿ ಘೋಷಣೆಗಳನ್ನೂ ಮೊಳಗಿಸುತ್ತಿದ್ದ ಕಾರಣ ಎಫ್ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಡಿಸಿಪಿ ದೀಪಕ್ ಯಾದವ್ ತಿಳಿಸಿದ್ದಾರೆ.