ಕೊರೊನಾ ವೈರಸ್ ವಿಶ್ವದಾದ್ಯಂತ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಅನೇಕರು ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಮಧ್ಯೆ ಸಂಶೋಧಕರು ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಖಿನ್ನತೆ ಕಡಿಮೆ ಮಾಡುವ anti-depressant ಮಾತ್ರೆ, ಕೋವಿಡ್ ಅಪಾಯವನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಗಳ ಕೈಗೆ ಮೊಬೈಲ್ ಕೊಟ್ಟ ತಾಯಿಗೆ ಬಳಿಕ ಕಾದಿತ್ತು ʼಬಿಗ್ ಶಾಕ್ʼ
ಬ್ರೆಜಿಲ್‌ನಲ್ಲಿ 1500 ರೋಗಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಫ್ಲೂವೊಕ್ಸಮೈನ್ ಎಂಬ ಔಷಧಿಯನ್ನು ನೀಡಿದವರಿಗೆ ಕೊರೊನಾ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ಖಿನ್ನತೆ ಕಡಿಮೆ ಮಾಡುವ ಔಷಧಿ ಫ್ಲುವೋಕ್ಸಮೈನ್ ತೆಗೆದುಕೊಂಡ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿಲ್ಲ. ಮನೆಯಲ್ಲಿಯೇ ಅವರು ಗುಣಮುಖರಾದರು ಎಂದು ವೈದ್ಯರು ಹೇಳಿದ್ದಾರೆ.
ಲುವೋಕ್ಸ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಈ ಔಷಧಿಯನ್ನು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಮತ್ತು ಖಿನ್ನತೆಯ ಚಿಕಿತ್ಸೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಉರಿಯೂತದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಔಷಧವು ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳನ್ನು ಸಹ ಕಡಿಮೆ ಮಾಡುತ್ತದೆ. ಕೊರೊನಾದಿಂದ ಬಳಲುವ 741 ಸ್ವಯಂಸೇವಕರಿಗೆ 10 ದಿನಗಳವರೆಗೆ ದಿನಕ್ಕೆ ಎರಡು ಬಾರಿ 100 ಮಿಗ್ರಾಂ ಫ್ಲೂವೊಕ್ಸಮೈನ್ ನೀಡಲಾಯ್ತು. 756 ರೋಗಿಗಳಿಗೆ ಪ್ಲಸೀಬೊ ಮಾತ್ರೆ ನೀಡಲಾಯಿತು.
BIG BREAKING: ಒಂದೇ ದಿನ ಮತ್ತೆ 14,348 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಭಾರಿ ಏರಿಕೆ
ಫ್ಲೂವೊಕ್ಸಮೈನ್ ನೀಡಿದ ರೋಗಿಗಳಲ್ಲಿ ಸುಮಾರು ಶೇಕಡಾ 11 ರಷ್ಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯ್ತು. ಪ್ಲಸೀಬೊ ನೀಡಿದವರಲ್ಲಿ ಈ ಸಂಖ್ಯೆ ಶೇಕಡಾ 16 ರಷ್ಟಿತ್ತು. ಇದು ಶೇಕಡಾ 5 ರಷ್ಟು ಸಂಪೂರ್ಣ ಅಪಾಯವನ್ನು ಮತ್ತು ಶೇಕಡಾ 32ರಷ್ಟು ಇತರ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ವರದಿಯಲ್ಲಿ ಹೇಳಲಾಗಿದೆ.
ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಈ ಔಷಧವನ್ನು ಸೇರಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.