alex Certify BIG NEWS: ಅಂತರಗಂಗೆ ಬೆಟ್ಟದ ಮೇಲೆ ವಿವಾದಾತ್ಮಕ ಬರಹ; ಓರ್ವ ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಂತರಗಂಗೆ ಬೆಟ್ಟದ ಮೇಲೆ ವಿವಾದಾತ್ಮಕ ಬರಹ; ಓರ್ವ ಆರೋಪಿ ಅರೆಸ್ಟ್

ಕೋಲಾರ: ಅಂತರಗಂಗೆ ಬೆಟ್ಟದ ಬಂಡೆಯ ಮೇಲೆ ಹಸಿರು ಹಾಗೂ ಬಿಳಿ ಪೇಂಟ್ ನಲ್ಲಿ ವಿವಾದಾತ್ಮಕ ಬರಹಗಳನ್ನು ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪಾಪರಾಜನಹಳ್ಳಿಯ ಅನ್ವರ್ ಅಲಿಯಾಸ್ ಪ್ಯಾರೇಜಾನ್ ಬಂಧಿತ ಆರೋಪಿ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗುಹೆ ನಿರ್ಮಾಣ ಮಾಡಿಕೊಂಡು ಬಂಡೆಗಳ ಮೇಲೆ ವಿವಾದಾತ್ಮಕ ಬರಹಗಳನ್ನು ಬರೆದಿದ್ದ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಂಧಿತ ಆರೋಪಿ ಅಂತರಗಂಗೆ ಬೆಟ್ಟದ ಹಲವು ಬಂಡೆಗಳ ಮೇಲೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಹಾಗೂ ಅಲ್ಲಾಹುಗೆ ಸಂಬಂಧಿಸಿದ ಬರಹಗಳನ್ನು ಬರೆದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...