ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ‘ವೈರಲ್ ಫೀವರ್’ ಜೊತೆ ಸಾಂಕ್ರಾಮಿಕ ರೋಗವು ಮಕ್ಕಳನ್ನು ಕಾಡಲು ಶುರುವಾಗಿದೆ.
ಚಳಿ-ಮಳೆ, ಹವಾಮಾನ ಏರುಪೇರು ಆಗುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಸಾಂಕ್ರಾಮಿಕ ತಾಂಡವವಾಡುತ್ತಿದೆ.ಅಲ್ಲದೇ ಶಾಲೆಗಳಲ್ಲಿ ಕಲುಷಿತ ನೀರು ಸೇವನೆ ಹಾಗೂ ರಸ್ತೆ ಬದಿ ಸೇವಿಸುವ ಆಹಾರಗಳಿಂದ ಮಕ್ಕಳಲ್ಲಿ ವೈರಲ್ ಫೀವರ್’ ಕಂಡು ಬರುತ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಲ್ಲಿ ನ್ಯುಮೋನಿಯಾ, ಉಸಿರಾಟದ ಸಮಸ್ಯೆ ಹಾಗೂ ವೈರಲ್ ಫೀವರ್ ಹೆಚ್ಚಾಗುತ್ತಿದೆ. ಜನರು ಮನೆ ಸುತ್ತ ಸ್ವಚ್ಚತೆ ಕಾಪಾಡಿಕೊಂಡು ಬಿಸಿ ನೀರು ಕುಡಿಯುವಂತೆ ವೈದ್ಯರರು ಸಲಹೆ ನೀಡಿದ್ದಾರೆ.ಅಲ್ಲದೇ ಕೆಮ್ಮು ಜ್ವರ, ಉಸಿರಾಟದ ಸಮಸ್ಯೆ ಕಾಡುತ್ತಿದೆ. ಮಕ್ಕಳು ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.