ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ಡೆಂಗ್ಯೂ ಜೊತೆ ಜಾಂಡೀಸ್ ಮಕ್ಕಳನ್ನು ಕಾಡಲು ಶುರುವಾಗಿದೆ.
ಮುಂಗಾರು ಮಳೆ ಆರಂಭವಾದ ಬಳಿಕ ಸಾಂಕ್ರಾಮಿಕ ರೋಗಗಳು ಬೆಂಗಳೂರಿನ ಜನರನ್ನು ಕಾಡುತ್ತಿದೆ. ಡೆಂಗ್ಯೂ ಮಹಾಮಾರಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಮಕ್ಕಳಲ್ಲಿ ಜಾಂಡೀಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಶಾಲೆಗಳಲ್ಲಿ ಕಲುಷಿತ ನೀರು ಸೇವನೆ ಹಾಗೂ ರಸ್ತೆ ಬದಿ ಸೇವಿಸುವ ಆಹಾರಗಳಿಂದ ಜಾಂಡೀಸ್ ಮಕ್ಕಳಲ್ಲಿ ಕಂಡು ಬರುತ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಜಾಂಡೀಸ್ ಸೂಚನೆ ಹಾಗೂ ಲಕ್ಷಣಗಳು
• ಜ್ವರಚಳಿಜ್ವರ
• ಹೊಟ್ಟೆ ನೋವುಫ್ಲೂ ಜ್ವರದಂತೆಯೇ ತೋರುವ ಲಕ್ಷಣಗಳು
• ಚರ್ಮದ ಬಣ್ಣದಲ್ಲಿ ಬದಲಾವಣೆ
ಇದು ಜ್ವರ, ತಲೆನೋವು, ಬೆನ್ನು ನೋವು, ಚಳಿ, ಹಸಿವಿಲ್ಲದಿರುವಿಕೆ, ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಈ ಸನ್ನಿವೇಶಗಳಲ್ಲಿ ಸೋಂಕು ಕೇವಲ ಮೂರು ಅಥವಾ ನಾಲ್ಕು ದಿನಗಳವರೆಗೆ ಇರುತ್ತದೆ.
೧೫% ರೋಗಿಗಳು ಪುನರಾವರ್ತಿತ ಜ್ವರದೊಂದಿಗೆ ರೋಗದ ನಂಜಿನ ಎರಡನೇ ಘಟ್ಟವನ್ನು ತಲುಪುತ್ತಾರೆ. ಇದರಿಂದಾಗಿ ಪಿತ್ತಜನಕಾಂಗ ಹಾನಿಗೊಂಡು ಕಿಬ್ಬೊಟ್ಟೆಯ ನೋವಿನೊಂದಿಗ ಕಾಮಾಲೆಗೆ ಕಾರಣವಾಗುತ್ತದೆ. ಬಾಯಿ, ಕಣ್ಣು ಹಾಗೂ ಜಠರ ಕರುಳು ವ್ಯೂಹದಲ್ಲಿನ ರಕ್ತಸ್ರಾವವು ರಕ್ತವಾಂತಿಗೆ ಕಾರಣವಾಗುತ್ತದೆ.ಇದಕ್ಕೆ ವೊಮಿಟೋ ನೆಗ್ರೋ ಎಂದು ಹೆಸರಿಸಲಾಗಿದೆ.