ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬರ ಮೇಲೆ ಕಾಡು ಹಂದಿಗಳು ದಾಳಿ ಮಾಡಿವೆ. ಬೇಲೂರು ತಾಲೂಕಿನ ನಿಟ್ಟೂರು ಗ್ರಾಮದ ಬಳಿ ಮಹಿಳೆ ಮೇಲೆ ಕಾಡು ಹಂದಿಗಳು ದಾಳಿ ಮಾಡಿವೆ.
ಜಮೀನಿಗೆ ತೆರಳಿದ್ದ 55 ವರ್ಷದ ಚಂದ್ರಕಲಾ ಅವರು ಕಾಡು ಹಂದಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಅವರ ಮೇಲೆ ಕಾಡು ಹಂದಿಗಳು ದಾಳಿ ನಡೆಸಿ ಕೈ ಹಾಗೂ ಕಾಲುಗಳನ್ನು ಕಚ್ಚಿವೆ. ಕಾಡು ಹಂದಿಗಳ ಹಿಂಡಿನ ದಾಳಿಯಿಂದ ಗಾಯಗೊಂಡ ಮಹಿಳೆ ಚೀರಾಡಿದ್ದಾರೆ. ಅಕ್ಕ-ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳು ಚಂದ್ರಕಲಾ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.