ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹಂತಕರಿಗೆ ಪತ್ರಕರ್ತರಂತೆ ಪೋಸ್ ಕೊಡಲು ತರಬೇತಿ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕೊಲೆಗಾರರಿಗೆ ಸುದ್ದಿ ವರದಿಯ ಬಗ್ಗೆ ತರಬೇತಿ ನೀಡಲಾಗಿದೆ. ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಪೊಲೀಸರು ಮತ್ತು ಮಾಧ್ಯಮದ ಮುಂದೆ ಮೂವರು ಗುಂಡಿಕ್ಕಿ ಕೊಂದಿದ್ದರು.
ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಿ ನಂತರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಲವಲೇಶ್ ತಿವಾರಿಗೆ ತರಬೇತಿ ನೀಡಿದ್ದಕ್ಕಾಗಿ ಬಂದಾ ಜಿಲ್ಲೆಯ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಯುಪಿ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಹಂತಕರು ಅತೀಕ್ ಅನ್ನು ಒಂದು ದಿನದ ಹಿಂದೆಯೇ ಹತ್ಯೆ ಮಾಡಲು ಪ್ರಯತ್ನಿಸಿದ್ದರು, ಆದರೆ ಸಾಧ್ಯವಾಗಿರಲಿಲ್ಲ. ಲವ್ಲೇಶ್ ತಿವಾರಿ, ಅರುಣ್ ಮೌರ್ಯ ಮತ್ತು ಸನ್ನಿ ಸಿಂಗ್ ಎಂದು ಗುರುತಿಸಲಾದ ಆರೋಪಿಗಳು ಶನಿವಾರ ಅತೀಕ್ ಅಹ್ಮದ್ ಮತ್ತು ಅವರ ಸೋದರನನ್ನು ಇಡೀ ದಿನ ಪತ್ರಕರ್ತರಂತೆ ಬಿಂಬಿಸಿಕೊಂಡು ಹತ್ತಾರು ಟಿವಿ ಕ್ಯಾಮೆರಾಗಳು ಮತ್ತು ಪೊಲೀಸರ ಮುಂದೆ ಗುಂಡು ಹಾರಿಸಿ ಕೊಂದಿದ್ದರು.