ಹೈದರಾಬಾದ್ : ತೆಲಂಗಾಣದ ಯಾದಾದ್ರಿ ಭೋಂಗೀರ್ ಜಿಲ್ಲೆಯ ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
ಹೌರಾ-ಸಿಕಂದರಾಬಾದ್ ಫಲಕ್ನುಮ್ ಎಕ್ಸ್ ಪ್ರೆಸ್ ರೈಲಿನ ಒಂದು ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಾಗ ಎಚ್ಚರಿಕೆ ನೀಡಿದ ಲೋಕೋ ಪೈಲಟ್ ಪಗಿಡಿಪಲ್ಲಿ ಮತ್ತು ಬೊಮ್ಮಯಪಲ್ಲಿ ನಡುವೆ ರೈಲನ್ನು ನಿಲ್ಲಿಸಿದರು. ಪ್ರಯಾಣಿಕರಲ್ಲಿ ಭೀತಿ ಇತ್ತು ಆದರೆ ಪಕ್ಕದ ಬೋಗಿಗಳಿಗೆ ಬೆಂಕಿ ಹರಡುವ ಮೊದಲು ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯಲ್ಲಿ ನಾಲ್ಕು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದರೆ, ಇತರ ಎರಡು ಬೋಗಿಗಳು ಭಾಗಶಃ ಹಾನಿಗೊಳಗಾಗಿವೆ. ಇತರ ಬೋಗಿಗಳಿಗೆ ಬೆಂಕಿ ಹರಡದಂತೆ ತಡೆಯಲು ರೈಲ್ವೆ ಸಿಬ್ಬಂದಿ ಪೀಡಿತ ಬೋಗಿಗಳನ್ನು ಡಿಲಿಂಕ್ ಮಾಡಿದರು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.