alex Certify ಮೊಬೈಲ್ ಕಳ್ಳನನ್ನು ಚಲಿಸುವ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಯಾಣಿಕರು…! ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಕಳ್ಳನನ್ನು ಚಲಿಸುವ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಯಾಣಿಕರು…! ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೊಬೈಲ್ ಕಳ್ಳನನ್ನು ಹಿಡಿದು 5 ಕಿಲೋಮೀಟರ್‌ಗಳವರೆಗೆ ರೈಲಿನ ಕಿಟಕಿಗೆ ನೇತು ಹಾಕಿದ ಪ್ರಸಂಗ ನಡೆದಿದೆ.

ವೇಗವಾಗಿ ಚಲಿಸುತ್ತಿರುವ ರೈಲಿನ ಕಿಟಕಿಯ ಹೊರಗೆ ಕಳ್ಳನು ನೇತಾಡುತ್ತಿದ್ದಾಗ, ಒಳಗಿರುವ ಹಲವಾರು ಜನರು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದು ಆ ಕ್ಲಿಪ್ ವೈರಲ್ ಆಗಿದೆ.

ಈ ವಿಡಿಯೊವನ್ನು ಹಂಚಿಕೊಂಡ ಟ್ವೀಟರ್ ಬಳಕೆದಾರರು ಬಿಹಾರದ ಭಾಗಲ್ಪುರದಲ್ಲಿ ಮೊಬೈಲ್ ಕಳ್ಳನನ್ನು ಹಿಡಿದ ಪ್ರಯಾಣಿಕರು ಆತನನ್ನು ರೈಲಿನ‌ ಕಿಟಕಿಗೆ ನೇತು ಹಾಕಿದ್ದರು‌. ಹಾಗೆಯೇ ಪ್ರಯಾಣಿಕರು ಕಳ್ಳನಿಗೆ ತೀವ್ರವಾಗಿ ಥಳಿಸಿದ್ದಾರೆ. ಈ ರೀತಿ ಮಾಡುವುದು ತಪ್ಪು, ನಾವು ಇನ್ನೊಬ್ಬರ ಜೀವನದೊಂದಿಗೆ ಆಟವಾಡಬಾರದು. ಕಳ್ಳನನ್ನು ಹಿಡಿದು ತಕ್ಷಣವೇ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...