
ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವ ಚಿತ್ರದ ಮತ್ತೊಂದು ಲಿರಿಕಲ್ ಹಾಡು ಇದೆ ಮಾರ್ಚ್ 9ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಸಪ್ತಮಿ ಗೌಡ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಯುವರಾಜ್ ಕುಮಾರ್ ಗೆ ಜೋಡಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸುಧಾರಾಣಿ, ಕಿಶೋರ್, ಅಚ್ಯುತ್ ಕುಮಾರ್, ತೆರೆ ಹಂಚಿಕೊಂಡಿದ್ದಾರೆ. ಅಜನೇಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಆಶಿಕ್ ಸಂಕಲನ, ಶ್ರೀಶ ಕುಡುವಳ್ಳಿ ಛಾಯಾಗ್ರಹಣವಿದೆ.
