
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಧನ್ವೀರ್ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಹು ನಿರೀಕ್ಷಿತ ‘ವಾಮನ’ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ.
ಈಗಾಗಲೇ ಹಾಡುಗಳ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 2 ಕ್ಕೆ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
ಶಂಕರ್ ರಾಮನ್ ನಿರ್ದೇಶನದ ಈ ಚಿತ್ರದಲ್ಲಿ ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚೇತನ್ ಗೌಡ ನಿರ್ಮಾಣ ಮಾಡಿದ್ದಾರೆ. ಆದಿತ್ಯ ಮೆನನ್ ಸೇರಿದಂತೆ ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಸಂಪತ್ ರಾಜ್ ತೆರೆ ಹಂಚಿಕೊಂಡಿದ್ದಾರೆ.
