ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರ ಈಗಾಗಲೇ ತನ್ನ ಹಾಡುಗಳಿಂದಲೇ ಗಾನಪ್ರಿಯರ ಗಮನ ಸೆಳೆದಿದ್ದು, ಇದರ ಮತ್ತೊಂದು ಗೀತೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ‘ನಡಿ ನಡಿ’ ಎಂಬ ಈ ಹಾಡಿಗೆ ಸೋನು ನಿಗಮ್, ಸಂಗೀತಾ ರವೀಂದ್ರನಾಥ್ ಧ್ವನಿಯಾಗಿದ್ದು, ವಿ ಶ್ರೀಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕವಿರಾಜ್ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ಪವಿತ್ರ ಇಂಟರ್ನ್ಯಾಷನಲ್ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಚಲವಾದಿ ಕುಮಾರ್ ನಿರ್ಮಾಣ ಮಾಡಿದ್ದು, ಆಂಟನಿ ಸಂಕಲನ, ಸತ್ಯ ಹೆಗ್ಡೆ ಛಾಯಾಗ್ರಹಣವಿದೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಸೇರಿದಂತೆ ರಂಗಾಯಣ ರಘು, ಸಾಧು ಕೋಕಿಲ, ರಾಗಿಣಿ, ಚೇತನ್ ಚಂದ್ರ, ತೆರೆ ಹಂಚಿಕೊಂಡಿದ್ದಾರೆ.