
ಬಸವರಾಜ್ ಬಳ್ಳಾರಿ ನಿರ್ದೇಶನದ ‘ರತ್ನ’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರತಂಡ ಇದೀಗ ಮತ್ತೊಂದು ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಬಂಗಾರ ಓ ನನ್ನ ಮುದ್ದು’ ಎಂಬ ಈ ಹಾಡಿಗೆ ಸತೀಶ್ ಬಾಬು ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಬಸವರಾಜ್ ಬಳ್ಳಾರಿ ಸಾಹಿತ್ಯವಿದೆ.
ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಬಸವರಾಜ್ ಬಳ್ಳಾರಿ ಅವರೇ ತಮ್ಮ ಬಸವರಾಜ್ ಬಳ್ಳಾರಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಹರ್ಷಲಾ ಹನಿ ಮತ್ತು ವರ್ಧನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸತೀಶ್ ಬಾಬು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.