ದೀಪಕ್ ಸುಬ್ರಮಣ್ಯ ಅಭಿನಯದ ಮಧುಚಂದ್ರ ನಿರ್ದೇಶನದ ‘ಮಿಸ್ಟರ್ ರಾಣಿ’ ಚಿತ್ರದ ಮತ್ತೊಂದು ಹಾಡು ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಪಂಚಂ ಜೀವ ಹಾಗೂ ಶಿವಾನಿ ನವೀನ್ ಧ್ವನಿಯಲ್ಲಿ ಮೂಡಿ ಬಂದಿರುವ ‘ಬುಡಕ್ಕೆ ಬೆಂಕಿ’ ಎಂಬ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಮಧುಚಂದ್ರ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಕಿರುತೆರೆ ನಟ ದೀಪಕ್ ಸುಬ್ರಮಣ್ಯ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪ ಪ್ರಭಾಕರ್, ಆನಂದ್ ನೀನಾಸಂ, ಲಕ್ಷ್ಮಿ ಕಾರಂತ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಕ್ಸೆಲ್ ಆರ್ಬಿಟ್ ಕ್ರಿಯೇಶನ್ಸ್ ನಿರ್ಮಾಣ ಮಾಡಿದ್ದು, ಮಧು ತುಂಬಾ ಕೆರೆ ಸಂಕಲನ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ರವೀಂದ್ರನಾಥ್ ಟಿ ಛಾಯಾಗ್ರಹಣ, ಧನಂಜಯ, ಹಾಗೂ ಶೇಶ್ ರಾವ್ ಅವರ ನೃತ್ಯ ನಿರ್ದೇಶನವಿದೆ.