
ಪ್ರಮೋದ್ ಜಯ ಆಕ್ಷನ್ ಕಟ್ ಹೇಳಿರುವ ‘ದಿಲ್ ಖುಷ್’ ಚಿತ್ರದ ಎರಡನೇ ಹಾಡು ಇಂದು ಸಂಜೆ ನಾಲ್ಕು ಗಂಟೆಗೆ ಜಯಪ್ರಭ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
‘ಜೋಡಿ ನೋಡು’ ಎಂಬ ಈ ಮೆಲೋಡಿ ಹಾಡಿಗೆ ಜಿತಿನ್ ರಾಜ್ ಧ್ವನಿಯಾಗಿದ್ದು, ಪ್ರಸಾದ್ ಕೆ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಧೀರಜ್ ಶೆಟ್ಟಿ ಸಾಹಿತ್ಯವಿದೆ.
ಈ ಚಿತ್ರದಲ್ಲಿ ರಂಜಿತ್ ಮತ್ತು ಕಿರುತೆರೆ ನಟಿ ಸ್ಪಂದನ ಸೋಮಣ್ಣ ಸೇರಿದಂತೆ ರಂಗಾಯಣ ರಘು, ಧರ್ಮಣ್ಣ ಕಡೂರ್, ಅರುಣಾ ಬಾಲ್ರಾಜ್, ರಾಘು ರಾಮನ ಕೊಪ್ಪ ತೆರೆ ಹಂಚಿಕೊಂಡಿದ್ದಾರೆ. ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ನಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭಾಶೇಖರ್ ಬಂಡವಾಳ ಹೂಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನವಿದ್ದು, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.
