
ಡಾರ್ಲಿಂಗ್ ಕೃಷ್ಣ ಅಭಿನಯದ ದೀಪಕ್ ಅರಸ್ ನಿರ್ದೇಶನದ ‘ಶುಗರ್ ಫ್ಯಾಕ್ಟರಿ’ ಸಿನಿಮಾ ನವೆಂಬರ್ 24ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಇದಕ್ಕೂ ಮುಂಚೆ ಲಿರಿಕಲ್ ಸಾಂಗ್ ಒಂದನ್ನು ರಿಲೀಸ್ ಮಾಡಲು ನಿರ್ಧರಿಸಿದೆ. ನವೆಂಬರ್ 1 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ
ಬಾಲಮಣಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಆರ್. ಗಿರೀಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಸೋನಾಲ್ ಮಂಟೈರಾ, ಅದ್ವಿತಿ ಶೆಟ್ಟಿ, ರೂಹಾನಿ ಶೆಟ್ಟಿ, ಹಾಗೂ ರಂಗಾಯಣ ರಘು ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಛಾಯಾಗ್ರಹಣವಿದ್ದು, ಪ್ರಕಾಶ್ ಸಂಕಲನವಿದೆ.
