
ಟೇಬಲ್ ನಲ್ಲಿ ಕೂತಿದ್ದ ವ್ಯಕ್ತಿಯ ಮುಂದೆ ಊಟದ ತಟ್ಟೆಯಿದ್ದು ಆತ ಊಟ ಸೇವನೆಗೂ ಮುನ್ನ ಸುಸ್ತಾದವರಂತೆ ತಟ್ಟೆಯ ಮೇಲೇ ಬೀಳುತ್ತಾರೆ. ಅವರಿಗೆ ಏನಾಯಿತೆಂದು ಎದುರಿಗಿದ್ದ ಮಹಿಳೆ ಆತಂಕದಿಂದ ನೋಡುತ್ತಿರುವಾಗಲೇ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹಠಾತ್ ಸಾವಿನ ಪ್ರಕರಣ ಮತ್ತೊಮ್ಮೆ ಜನರಲ್ಲಿ ಆತಂಕ ಉಂಟುಮಾಡಿದೆ.
ವಿಡಿಯೋ ನೋಡಿದವರು ಇತ್ತೀಚಿಗೆ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಸಿಪಿಆರ್ ಮಾಡುವ ತರಬೇತಿಯನ್ನು ಜನರಿಗೆ ನೀಡಬೇಕಾಗಿದೆ ಎಂದಿದ್ದಾರೆ. ಕೋವಿಡ್ ಲಸಿಕೆಯಿಂದ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಚರ್ಚೆಯ ನಡುವೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.