ಬೆಂಗಳೂರು : ಥಿಯೇಟರ್ ನ ವಾಶ್ ರೂಂ ನಲ್ಲಿ ಅಪ್ರಾಪ್ತ ಬಾಲಕನೋರ್ವ ಮೊಬೈಲ್ ಇಟ್ಟು ಯುವತಿಯ ವಿಡಿಯೋ ರೆಕಾರ್ಡ್ ಮಾಡಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದುನಿಯಾ ವಿಜಯ್ ಅಭಿನಯದ ‘ಭೀಮ’ ಸಿನಿಮಾ ವೀಕ್ಷಿಸಲು ನಗರದ ಊರ್ವಶಿ ಥಿಯೇಟರ್ ಗೆ ಯುವತಿಯೊಬ್ಬರು ಬಂದಿದ್ದರು. ನಂತರ ರಾತ್ರಿ 9:30 ರ ವೇಳೆಗೆ ವಾಶ್ ರೂಂಗೆ ಹೋಗಿದ್ದಾರೆ. ಈ ವೇಳೆ ಸಿನಿಮಾ ನೋಡಲು ಬಂದಿದ್ದ ದುರುಳನೋರ್ವ ಶೌಚಾಲಯದ ಕಿಟಕಿ ಹತ್ತಿರ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಿಸಿದ್ದಾನೆ.
ಈ ವಿಚಾರ ಯುವತಿಯ ಗಮನಕ್ಕೆ ಬಂದಿದ್ದು, ತಕ್ಷಣ ಕೂಗಿಕೊಂಡು ಓಡಿ ಬಂದಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಅಪ್ರಾಪ್ತ ಬಾಲಕನನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜನಪ್ರಿಯ ಕಾಫಿ ಕೆಫೆ ಥರ್ಡ್ ವೇವ್ ಕಾಫಿಯಲ್ಲಿ ವಾಶ್ ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿತ್ತು. ಉದ್ಯೋಗಿಯೊಬ್ಬರು ಸ್ಮಾರ್ಟ್ ಫೋನ್ ಅನ್ನು ವಾಶ್ ರೂಮ್ ನ ಕಸದ ಬುಟ್ಟಿಯಲ್ಲಿ ಇರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಘಟನೆ ನಡೆದಿದೆ.