ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯದಲ್ಇ ಅಕ್ಕಿ ಬೆಲೆಯು ಸರಾಸರಿ ಶೇ. 15 ರಷ್ಟು ಏರಿಕೆಯಾಗಿದೆ.
ಈ ವರ್ಷ ಮುಂಗಾರು ಮಳೆ ವಿಳಂಬ, ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಶೇ. 15 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.
ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ 50 ರೂ.ನಿಂದ ರಿಂದ 60 ರೂ.ಗೆ ಏರಿಕೆಯಾಗಿದೆ. ರಾಜಮುಡಿ ಅಕ್ಕಿ ಕೆ.ಜಿಗೆ 70 ರಿಂದ 74 ರೂ. ವರೆಗೆ ತಲುಪಿದೆ. ಬಿಪಿಎಲ್ ಕುಟುಂಬಗಳು ಬಳಸುವ ಅಕ್ಕಿ ಕೆಜಿಗೆ 30 ರೂ.ನಿಂದ 36 ಕ್ಕೆ ಏರಿಕೆಯಾಗಿದೆ. ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಆಗಿಲ್ಲ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಅಕ್ಕಿ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.