ಬೆಂಗಳೂರು : ವಿದ್ಯುತ್ ದರ ಏರಿಕೆ ಶಾಕ್ ಬೆನ್ನಲ್ಲೇ ನೀರಿನ ದರ ಏರಿಸಲು ಜಲಮಂಡಳಿ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆ, ಬಂದ್ ಕೂಡ ನಡೆದಿತ್ತು. ಆದರೆ ಈ ಬೆನ್ನಲ್ಲೇ ಸದ್ದಿಲ್ಲದೇ ನೀರಿನ ದರ ಏರಿಸಲು ಜಲಮಂಡಳಿ ಚಿಂತನೆ ನಡೆಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿದ್ಯುತ್ ಬಿಲ್ ಹೆಚ್ಚಳದ ನಂತರ ನೀರಿನ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಮುಂದಾಗಿದೆ.
ವಿದ್ಯುತ್ ಬಿಲ್ ಏರಿಕೆಯಾಗಿರುವುದರಿಂದ ಜಲಮಂಡಳಿಯು ತಿಂಗಳಿಗೆ ಹೆಚ್ಚುವರಿ 10-12 ಕೋಟಿ ಹೆಚ್ಚುವರಿ ಬಿಲ್ ಕಟ್ಟುತ್ತಿದೆ. ಆದ್ದರಿಂದ ಜಲಮಂಡಳಿಗೆ ಹಣಕಾಸು ನಿರ್ವಹಣೆ ಕಷ್ಟವಾಗಿದ್ದು, ನೀರಿನ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ತರಕಾರಿ, ದಿನಸಿ ಬೆಲೆ ಗಗನಕ್ಕೇರಿದ್ದು, ಇದರ ನಡುವೆ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.