ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ಮಳೆ ಅಭಾವದಿಂದ ಭತ್ತದ ಬೆಳೆ ಕುಂಠಿತಗೊಂಡಿದ್ದು, ಈ ವರ್ಷ ಶೇ. 50 ರಷ್ಟು ಇಳುವರಿ ಕುಸಿತದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಕಳೆದ ವರ್ಷ ಈ ಸಮಯದಲ್ಲಿ ಸೋನಆಮಸೂರಿಯ ಹಳೆ ಅಕ್ಕಿ ಕ್ವಿಂಟಾಲ್ ಗೆ ಸಗಟು 4,000-4,200 ರೂ. ಇತ್ತು. ಈ ವರ್ಷ 6,500-6,800ರೂ.ವರೆಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಕೆಜಿಗೆ 25-26ರಷ್ಟು ಏರಿಕೆಯಾಗಿದೆ.
ಚಿಲ್ಲರೆ ದರ ಸೋನಾಮಸೂರಿ ಹಳೇ ಅಕ್ಕಿ ಕೆಜಿಗೆ 65-70 ರೂ.ಗೆ ಸ್ಟೀಮ್ ಅಕ್ಕಿ ಕೆಜಿಗೆ 60-65 ರೂ. ಗೆ ಮಾರಾಟವಾಗುತ್ತಿದೆ. ಕೊಲ್ಲಮ್ ಬುಲೆಟ್ ಅಕ್ಕಿ ಕೆಜಿಗೆ 75-80 ರೂ.ಗೆ ಮಾರಾಟವಾಗುತಿದೆ. ದಪ್ಪ ಅಕ್ಕಿ 25-30 ರೂ.ಇದ್ದದ್ದು, 40-45 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಆತಂಕ ಎದುರಾಗಿದೆ.