ಬೆಂಗಳೂರು : ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಇದೀಗ ಮೇವಿನ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಮೇವಿನ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೇವಿನ ಬೆಲೆಯಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಜಾನುವಾರು ಇರುವವರು ಸಂಕಷ್ಟ ಎದುರಿಸುವಂತಾಗಿದೆ. ರಾಗಿ ಹುಲ್ಲು ಪಿಂಡಿ 150 ರೂ.ನಿಂದ 200 ರೂ.ವರೆಗೆ ಇದ್ದದ್ದು, ಇದೀಗ 5,00 ರೂ.ನಿಂದ 600 ರೂ.ವರೆಗೆ ಮಾರಾಟವಾಗುತ್ತಿದೆ.
ಜೋಳದ ಮೇವಿಗೆ ಒಟ್ಟು ಕಟ್ಟಿಗೆ 10 ರಿಂದ 12 ರೂ. ಇತ್ತು. ಇದೀಗ ಒಂದು ಕಟ್ಟಿಗೆ 30 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಸುಮಾರು 1.05 ಕೋಟಿ ಜಾನುವಾರುಗಳಿದ್ದು, ಅಧಿಕ ಮೇವಿನ ಅಗತ್ಯವಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಬರಗಾಲದಿಂದ 46.11 ಲಕ್ಷ ಹೆಕ್ಟೇರ್ ನಲ್ಲಿದ್ದ ಕೃಷಿ ಬೆಳೆಗಳು ಹಾನಿಗೊಳಗಾಗಿವೆ.