ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಇಸಿಐಆರ್ ದಾಖಲು ಮಾಡಲಾಗಿದೆ.
ಲೋಕಾಯುಕ್ತ ಎಫ್ಐಆರ್ ಆಧರಿಸಿ ಎನ್ ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮಶನ್ ರಿಪೋರ್ಟ್ ದಾಖಲು ಮಾಡಲಾಗಿದ್ದು, ಪ್ರಕರಣ ಪರಿಶೀಲನೆ ನಡೆಸಲಾಗುವುದು. ಸಿಎಂ ವಿರುದ್ಧ ಪೊಲೀಸರ ಎಫ್ಐಆರ್ ಗೆ ಸಮಾನವಾದ ECIR ದಾಖಲಿಸಲಾಗಿದೆ ಎನ್ನಲಾಗಿದೆ.
ಪಿಎಮ್ಎಲ್ಎ ಕಾಯ್ದೆಯಡಿ ಇಡಿ ಕೇಸ್ ಫೈಲ್ ಮಾಡಿದೆ. ಪೊಲೀಸರ ಎಫ್ಐಆರ್ ಗೆ ಸರಿ ಸಮಾನವಾಗಿರುವ ಇಸಿಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ವಿಶೇಷ ಅಧಿಕಾರವಿದೆ. ವಿಚಾರಣೆಗೆ ಕರೆಯಬಲ್ಲ ಅಧಿಕಾರ, ತನಿಖೆಯ ಹಂತದಲ್ಲಿ ಆಸ್ತಿಗಗಳನ್ನು ಸೀಜ್ ಮಾಡುವ ಅಧಿಕಾರ ಇಡಿಗೆ ಇದೆ ಎನ್ನಲಾಗಿದೆ.