![](https://kannadadunia.com/wp-content/uploads/2023/01/7e287df4-4d38-46da-bdb2-8893365b863e.jpg)
ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹದಿನೈದು ದಿನಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ ಮಿಲ್ಯಕೋವ್ ಸೆರ್ಗೆ ಎಂಬ ರಷ್ಯನ್ ಶವವಾಗಿ ಪತ್ತೆಯಾಗಿದ್ದಾರೆ. 51 ವರ್ಷದ ರಷ್ಯಾ ವ್ಯಕ್ತಿ ನೌಕೆಯ ಮುಖ್ಯ ಇಂಜಿನಿಯರ್ ಆಗಿದ್ದು ಹಡಗು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಪರದೀಪ್ ಮೂಲಕ ಮುಂಬೈಗೆ ತೆರಳುತ್ತಿತ್ತು
ಮುಂಜಾನೆ 4.30ರ ಸುಮಾರಿಗೆ ಅವರ ಹಡಗಿನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣವನ್ನು ಪೊಲೀಸರು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಪರಾದೀಪ್ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿ ಎಲ್ ಹರಾನಂದ್ ರಷ್ಯಾದ ಇಂಜಿನಿಯರ್ ಸಾವನ್ನು ದೃಢಪಡಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ದಕ್ಷಿಣ ಒಡಿಶಾದ ರಾಯಗಡ ಪಟ್ಟಣದಲ್ಲಿ ಇಬ್ಬರು ರಷ್ಯಾದ ಪ್ರವಾಸಿಗರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಶಾಸಕರಾಗಿರುವ ಪಾವೆಲ್ ಆಂಟೊವ್ (65) ಅವರು ಡಿಸೆಂಬರ್ 24 ರಂದು ಹೋಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರೆ, ಅವರ ಸ್ನೇಹಿತ ವ್ಲಾಡಿಮಿರ್ ಬಿಡೆನೋವ್ (61) ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಎರಡೂ ಪ್ರಕರಣಗಳನ್ನು ಒಡಿಶಾ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.