alex Certify BIG NEWS : ಶೀಘ್ರವೇ ಮತ್ತೊಂದು ‘ಪುಲ್ವಾಮಾ ದಾಳಿ’ ನಡೆಯಲಿದೆ : ದೇಶದ್ರೋಹದ ಪೋಸ್ಟ್ ಹಾಕಿದ್ದ ‘ವಿದ್ಯಾರ್ಥಿ’ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಶೀಘ್ರವೇ ಮತ್ತೊಂದು ‘ಪುಲ್ವಾಮಾ ದಾಳಿ’ ನಡೆಯಲಿದೆ : ದೇಶದ್ರೋಹದ ಪೋಸ್ಟ್ ಹಾಕಿದ್ದ ‘ವಿದ್ಯಾರ್ಥಿ’ ಅರೆಸ್ಟ್

ಶೀಘ್ರವೇ ಮತ್ತೊಂದು ‘ಪುಲ್ವಾಮಾ ದಾಳಿ’ ನಡೆಯಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ‘ವಿದ್ಯಾರ್ಥಿ’ ಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ನ ಮುಸ್ಲಿಂ ವಿದ್ಯಾರ್ಥಿಯೊಬ್ಬ ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಹಾಕಿದ್ದಾನೆ.

ಯುವಕ ತನ್ನ ಎಕ್ಸ್ ಖಾತೆಯಲ್ಲಿ “ಬಹುತ್ ಜಲ್ದ್ ಇನ್ ಶಾ ಅಲ್ಲಾಹ್ ದುಸ್ರಾ ಪುಲ್ವಾಮಾ ಭಿ ಹೋಗಾ” (ಇನ್ಶಾ ಅಲ್ಲಾಹ್, ಶೀಘ್ರದಲ್ಲೇ ಮತ್ತೊಂದು ಪುಲ್ವಾಮಾ ದಾಳಿ ನಡೆಯಲಿದೆ ) ಎಂದು ಬರೆದುಕೊಂಡಿದ್ದಾನೆ. 2019 ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು.ಈತ ಮಾಡಿರುವ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಯನ್ನು  ಜಾರ್ಖಂಡ್ ನ ಜೆಮ್ಷೆಡ್ಪುರದ ಸರೈಕೆಲಾ ನಿವಾಸಿ ಮೊಹಮ್ಮದ್ ತಲ್ಹಾ ಮಝರ್ ಎಂದು ಗುರುತಿಸಲಾಗಿದೆ. ಈತ ದಿಯೋಬಂದ್ ನ ದಾರುಲ್ ಉಲೂಮ್ ಮದರಸಾದ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 26 ರಂದು ರಾತ್ರಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. “ಇನ್ಶಾ ಅಲ್ಲಾಹ್, ಶೀಘ್ರದಲ್ಲೇ ಮತ್ತೊಂದು ಪುಲ್ವಾಮಾ ದಾಳಿ ನಡೆಯಲಿದೆ” ಎಂದು ಬರೆದುಕೊಂಡಿದ್ದಾನೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ವಿದ್ಯಾರ್ಥಿಯನ್ನು ಬಂಧಿಸಿದೆ. ಸದ್ಯ, ಈತ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...