alex Certify ರಸ್ತೆಗಿಳಿದಿದೆ ಮಹಿಂದ್ರಾ ಕಂಪನಿಯ ಮತ್ತೊಂದು ಹೊಸ SUV; ಇಲ್ಲಿದೆ ಅದರ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಗಿಳಿದಿದೆ ಮಹಿಂದ್ರಾ ಕಂಪನಿಯ ಮತ್ತೊಂದು ಹೊಸ SUV; ಇಲ್ಲಿದೆ ಅದರ ವಿವರ

ಮಹೀಂದ್ರಾ ಆಂಡ್‌ ಮಹೀಂದ್ರಾ ಕಂಪನಿ ಒಂದಾದ ಮೇಲೊಂದರಂತೆ ಎಸ್‌ಯುವಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ XUV 700 AX5 ಸೆಲೆಕ್ಟ್ ರೂಪಾಂತರ ಬಿಡುಗಡೆಯಾಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ 16.89 ಲಕ್ಷ ರೂಪಾಯಿ ಇರಲಿದೆ. ಹೊಸ SUVಯ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ.

ಮಹೀಂದ್ರಾ XUV 700 AX5 ಸೆಲೆಕ್ಟ್ MT ರೂಪಾಂತರದೊಂದಿಗೆ ಪೆಟ್ರೋಲ್ ವಾಹನದ ಬೆಲೆ 16.89 ಲಕ್ಷ ರೂಪಾಯಿ ಇದ್ದರೆ, AT ರೂಪಾಂತರದ ಪೆಟ್ರೋಲ್ ವಾಹನದ ಬೆಲೆ 18.49 ಲಕ್ಷ ನಿಗದಿಪಡಿಸಲಾಗಿದೆ. ಡೀಸೆಲ್ MT ಮಾದರಿಯ ಬೆಲೆ 17.49 ಲಕ್ಷ ಮತ್ತು AT ಮಾದರಿಯ ಬೆಲೆ 19.09 ಲಕ್ಷ ರೂಪಾಯಿ ಇದೆ. AX5 S ರೂಪಾಂತರವು AX3 ರೂಪಾಂತರಕ್ಕಿಂತ ಸುಮಾರು 50,000 ರೂಪಾಯಿಗಳಷ್ಟು ದುಬಾರಿಯಾಗಿದೆ. ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ಅವಲಂಬಿಸಿ ಈ ಬೆಲೆ ಸ್ವಲ್ಪ ಬದಲಾಗಬಹುದು.

ಹೊಸ ಎಸ್‌ಯುವಿ ವಿಶೇಷತೆ…

ಹೊಸ ಮಹೀಂದ್ರಾ XUV 700 AX5 ಸೆಲೆಕ್ಟ್ (AX5 S) AX3 ಮತ್ತು AX5 ನಡುವೆ ಇರುತ್ತದೆ. ಕೆಲವು ಹೆಚ್ಚುವರಿ ಫೀಚರ್‌ಗಳು ಇದರಲ್ಲಿದೆ. AX5 S ಏಳು ಆಸನಗಳ ವಿನ್ಯಾಸ ಹೊಂದಿದೆ. ಪನೋರಮಿಕ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಸ್ಕ್ರೀನ್, Amazon Alexa, ವೈರ್‌ಲೆಸ್ Apple CarPlay ಅನ್ನು ಇದು ಹೊಂದಿರುತ್ತದೆ.

ಹೊಸ AX5 S ರೂಪಾಂತರದಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತವಾಗಿ ಲಭ್ಯವಿದೆ. ಇದು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...